Sunday, June 29, 2025
spot_imgspot_img
spot_imgspot_img

ವಿಟ್ಲ: ಕೇರಳಕ್ಕೆ ಅಕ್ರಮ ಗೋಸಾಗಾಟ..! ಪಿಕಪ್‌ ತಡೆದು ಪೊಲೀಸರಿಗೊಪ್ಪಿಸಿದ ಹಿಂ.ಜಾ.ವೇ. ಕಾರ್ಯಕರ್ತರು

- Advertisement -
- Advertisement -

ವಿಟ್ಲ: ಕೇರಳಕ್ಕೆ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಪಿಕಪ್‌ ಅನ್ನು ಹಿಂ.ಜಾ.ವೇ. ಕಾರ್ಯಕರ್ತರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆಯಲ್ಲಿ ವಿಟ್ಲ ಸಮೀಪದ ಪುಣಚ ದೇವಿ ನಗರ ಬಳಿ ಅಕ್ರಮ ಗೋ ಸಾಗಾಟ ಪತ್ತೆಯಾಗಿದೆ.

ನಿರಂತರ ಗೋಸಾಗಾಟ ಮಾಡುವ ಮಹೇಶ್ವರ ಪಿಕಪ್ ಹಾಗೂ ಸುಂದರ ಎಂಬಾತ ಪೊಲೀಸ್ ವಶಕ್ಕೆ ನೀಡಲಾಗಿದೆ. ಗೋಸಾಗಾಟಕ್ಕೆ ಪರವಾನಿಗೆ ಮಾಡಿ ಸಾಗಾಟ ಮಾಡುವುದರಲ್ಲಿ ನಿಪುಣನಾಗಿರುವ ಈತ ಒಂದು ವಾರದ ಹಿಂದೆ ಆರ್ಲಪದವಿನಲ್ಲಿ ಸಿಕ್ಕಿಬಿದ್ದಿದ್ದ. ಆದರೆ ಪರವಾನಿಗೆ ತೋರಿಸಿ ಎಸ್ಕೇಪ್ ಆಗಿದ್ದ. ಆದರೆ ಈ ಸಲ ಒಂದು ಪರವಾನಿಗೆಯಲ್ಲಿ ಎರಡು ಗೋಗಳನ್ನು ಒಂದೇ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿತ್ತು.ಹೀಗಾಗಿ ಇರುವ ಪರವಾನಿಗೆ ಅಕ್ರಮವಾಗಿರುತ್ತದೆ ಎಂದು ಹಿಂ.ಜಾ.ವೇ. ಕಾರ್ಯಕರ್ತರು ಆರೋಪಿಸಿದ್ದಾರೆ.

ಸಿಕ್ಕಿಬಿದ್ದಿರುವ ಆರೋಪಿಗೆ ಕುಖ್ಯಾತ ಗೋ ಬ್ರೋಕರ್ ಆಗಿರುವ ಆಗಿರುವ ಹನಿಫ್ ತಿಂಗಳಾಡಿ ಆಪ್ತನಾಗಿದ್ದಾನೆ ಎಂದು ಸಹ ಹೇಳಲಾಗುತ್ತಿದೆ.

- Advertisement -

Related news

error: Content is protected !!