Monday, August 31, 2026
spot_imgspot_img
spot_imgspot_img

ಮಂಗಳೂರು: “ಮೊದಲ ರಾತ್ರಿಯ ಸಂಭ್ರಮ”; ಪೊಲೀಸ್‌ ಠಾಣೆ ಕಾಂಪೌಂಡ್ ಪಕ್ಕದಲ್ಲಿ ಫಸ್ಟ್‌ನೈಟ್‌ ವಿಶ್‌ ಬ್ಯಾನರ್‌..!!

- Advertisement -
- Advertisement -

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಪೊಲೀಸ್‌ ಠಾಣೆಯ ಕಾಂಪೌಂಡ್ ಗೋಡೆಗೆ ತಾಗಿಕೊಂಡಂತೆ ಯುವಕನೊಬ್ಬನ “ಮೊದಲ ರಾತ್ರಿಯ ಸಂಭ್ರಮ” ಎಂಬ ಹೋರ್ಡಿಂಗ್ಸ್ ಹಾಕಲಾಗಿದ್ದು ವ್ಯಂಗ್ಯಕ್ಕೆ ಗುರಿಯಾಗಿದೆ. ಅಲ್ಲದೆ, ಈ ಕುರಿತ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ರಾತ್ರಿಯಿಡೀ ಹೋರಾಡಿ ಗೆದ್ದು ಬಾ ಎಂದು ಗೆಳೆಯರು ಹಾರೈಸಿ ಸರ್ಕಾರಿ ಜಾಗದಲ್ಲಿ ದೊಡ್ಡ ಸಾಧನೆ ಎಂಬಂತೆ ಹೋರ್ಡಿಂಗ್ ಹಾಕಿದ್ದಾರೆ. ಸರ್ಕಾರಿ ಜಾಗದಲ್ಲಿ ಯಾವುದೇ ಅನುಮತಿ ಇಲ್ಲದೆ ತಮಗೆ ಇಷ್ಟಬಂದಂತೆ ಅಶ್ಲೀಲ ಸಂದೇಶ ಸಾರುವ, ಮುಜುಗರ ತರುವ ಜಾಹೀರಾತು ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಜೊತೆಗೆ ಮಳೆಗೆ ಚಳಿಗೆ ಕಚೇರಿಯಲ್ಲಿ ಕುಳಿತಿರುವ ಅಧಿಕಾರಿಗಳು ಮೈಚಳಿ ಬಿಟ್ಟು ಇಂತಹ ಅನಧಿಕೃತ, ಮತ್ತು ಅಶ್ಲೀಲ ಬ್ಯಾನರ್‌ಗಳ ವಿರುದ್ದ ದಂಡ ಅಥವಾ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!