Monday, June 8, 2026
spot_imgspot_img
spot_imgspot_img

ಮಂಗಳೂರು ಸಿಸಿಬಿ ದಾಳಿ ಬುಕ್ಕಿ ಸಹಿತ 11ಮಂದಿ ಬಂಧನ

- Advertisement -
- Advertisement -

*ಮಂಗಳೂರು* ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ 11 ಬುಕ್ಕಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾರ್‌ಶೀಟ್ ಬಳಿಯ ಮಹಾಮಹಿ ದೇವಸ್ಥಾನದ ಎದುರುಗಡೆಯ ಅಂಗಡಿಯ ಶ್ರೀನಿವಾಸ್, ಜಗದೀಶ್, ಉನ್ನಿ ಕೃಷ್ಣನ್‌, ಸುಧಾಕರ್, ಪ್ರತಾಪ್ ಶೆಟ್ಟಿ, ಜೋನ್, ತಿಮ್ಮಪ್ಪ ಗೌಡ, ರಿಚ್ಚರ್ಡ್ ಲೋಬೋ, ಮೊಹಿದ್ದಿನ್ ಕುನ್ನಿ, ಸುಬ್ರಹ್ಮಣ್ಯ ಶೇಟ್, ಗೌತಮ್ ಮಾಂಜಿ ಎಂದ. ಗುರುುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಸುಮಾರು 15,೦೦೦ ರೂಪಾಯಿಯ ಪೊಲೀಸರು ವಶ ಪಡೆಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಮೊಬೈಲ್ ಆಪ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬಂದರು ಪೊಲೀಸರಿಗೆ ಹಸ್ತಾಂತರ ಮಾಡಿದ್ದು, ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!