ದುಬೈ: ಕಿಂಗ್ಸ್ ಇಲವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ಇಂದು ಮುಖಾಮುಖಿ ಆಗುತ್ತಿವೆ. ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಎರಡು ಸೋಲು ಕಂಡಿರುವ . ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಫಾರ್ಮ್ನಲ್ಲಿರುವುದರಿಂದ ಪಂಜಾಬ್ಗೆ ದೊಡ್ಡ ಬಲ ಸಿಕ್ಕಂತಾಗಿದೆ.
ಇನ್ನು, ಮುಂಬೈ ತಂಡದಲ್ಲಿ ಇಶನ್ ಕಿಶನ್ ಒಳ್ಳೆಯ ಫಾರ್ಮ್ ಕಂಡುಕೊಂಡಿದ್ದು, ಇಂದು ಕೂಡ ಅವರು ಸಿಡಿಯುವ ಸಾಧ್ಯತೆ ಇದೆ. ಐದು ಕನ್ನಡಿಗರಿರುವ ಪಂಜಾಬ್ ತಂಡ ಉತ್ತಮ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ ಸೋಲನ್ನು ಅನುಭವಿಸುತ್ತಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ 224 ರನ್ ಸಿಡಿಸಿದ ಹೊರತಾಗಿಯೂ ಬೌಲಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡಿ ಸೋಲು ಕಂಡಿತ್ತು. ಹೀಗಾಗಿ, ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಗೊಳಿಸಿ ಕಣಕ್ಕೆ ಇಳಿಯುವ ಅಗತ್ಯತೆ ಪಂಜಾಬ್ಗೆ ಇದೆ.
ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಒಂದು ಪಂದ್ಯದಲ್ಲಿ ಉತ್ತಮವಾಗಿ ಆಡಿದರೆ ಮತ್ತೊಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ, ಅವರು ಉತ್ತಮವಾಗಿ ಆಡುವ ಅಗತ್ಯತೆ ಇದೆ.