Thursday, June 18, 2026
spot_imgspot_img
spot_imgspot_img

ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ಕಿರುತೆರೆ ನಟಿ ಶ್ರುತಿ

- Advertisement -
- Advertisement -

ತಮಿಳಿನ ಕಿರುತೆರೆ ನಟಿ ಶ್ರುತಿ ಶಣ್ಮುಗ ಪ್ರಿಯಾ ಅವರ ಪತಿ ಅರವಿಂದ್ ಶೇಖರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ವರ್ಷ ಈ ಜೋಡಿ ಮದುವೆಯಾಗಿದ್ದರು. 30ನೇ ವಯಸ್ಸಿಗೆ ಅರವಿಂದ್ ಮೃತಪಟ್ಟಿದಾರೆ. ಅವರ ಸಾವು ಪತ್ನಿ ಶ್ರುತಿ ಮತ್ತು ಕುಟುಂಬಕ್ಕೆ ಆಘಾತವುಂಟು ಮಾಡಿದೆ.

ವಾಣಿ ರಾಣಿ, ಕಲ್ಯಾಣಿ ಪರಿಸು, ಭಾರತಿ ಕಣ್ಣಮ್ಮ ಎಂದು ತಮಿಳು ಸೀರಿಯಲ್ ಮೂಲಕ ಮಗಗೆದ್ದ ನಟಿ ಶ್ರುತಿ ಶಷ್ಮುಗ ಪ್ರಿಯಾ ಅವರಿಗೆ ಪತಿ ಅರವಿಂದ್ ಸಾವು ಶಾಕ್ ಕೊಟ್ಟಿದೆ. ಶ್ರುತಿ ಹಾಗೂ ಅರವಿಂದ್ ಅವರು ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಕಳೆದ ವರ್ಷ ಮೇ ತಿಂಗಳಲ್ಲಿ ಇಬ್ಬರೂ ಮದುವೆ ಆದರು. ಶ್ರುತಿ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ನಂತರ ಕಿರುತೆರೆಗೆ ಕಾಲಿಟ್ಟರು.

ಶ್ರುತಿ ಶಣ್ಮುಗ ಅವರ ಪತಿ ಅರವಿಂದ್ ಅವರು ಬಾಡಿ ಬಿಲ್ಡರ್ ಆಗಿದ್ದರು. ದೇಹದ ತೂಕ ಇಳಿಸಿಕೊಳ್ಳಲು ಅವರು ಟ್ರೇನಿಂಗ್ ನೀಡುತ್ತಿದ್ದರು. 2022ರ ಮಿಸ್ಟರ್ ತಮಿಳುನಾಡು ಕೂಡ ಆಗಿದ್ದರು. ಫಿಟ್ನೆಸ್‌ಗೆ ಅವರು ಹೆಚ್ಚು ಒತ್ತು ನೀಡುತ್ತಿದ್ದರು. ಆಗಸ್ಟ್ 2ರ ಸಂಜೆ ಅವರಿಗೆ ಹೃದಯಾಘಾತ ಆಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

- Advertisement -

Related news

error: Content is protected !!