Sunday, June 14, 2026
spot_imgspot_img
spot_imgspot_img

ಬಹುಮಹಡಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ; 6 ಮಂದಿ ಸಾವು, 40 ಮಂದಿಗೆ ಗಾಯ

- Advertisement -
- Advertisement -

ಬಹುಮಹಡಿ ಕಟ್ಟಡ ಒಂದರಲ್ಲಿ ಮುಂಜಾನೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಆರು ಜನ ಸಾವಿಗೀಡಾದ ಘಟನೆ ಮುಂಬೈನ ಗೋರೆಗಾಂವ್‍ನಲ್ಲಿ ನಡೆದಿದೆ. ಘಟನೆಯಲ್ಲಿ 40 ಮಂದಿ ಗಾಯಗೊಂಡಿದ್ದಾರೆ.

ಬೆಂಕಿಗೆ ಆಹುತಿಯಾದ ಆರು ಜನರಲ್ಲಿ ಓರ್ವ ಪುರುಷ, ಐವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ. ಗಾಯಗೊಂಡ 40 ಜನರಲ್ಲಿ 12 ಪುರುಷರು ಮತ್ತು 28 ಮಹಿಳೆಯರು, ಓರ್ವ ಅಪ್ರಾಪ್ತ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮುಂಬೈನ ಎಚ್‍ಬಿಟಿ ಮತ್ತು ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋರೆಗಾಂವ್‍ನ ಪಶ್ಚಿಮ ಆಜಾದ್ ನಗರದ ಪ್ರದೇಶದ ಜೈ ಭವಾನಿ ಕಟ್ಟಡದಲ್ಲಿ ಮುಂಜಾನೆ 3ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅವಘಡಕ್ಕೆ ಕಾರಣ ಏನೆಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!