Sunday, June 29, 2025
spot_imgspot_img
spot_imgspot_img

ಎನ್‌ಸಿಸಿ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಯಿಂದ ಅಮಾನುಷವಾಗಿ ಹಲ್ಲೆ; ವಿಡಿಯೋ ವೈರಲ್‌

- Advertisement -
- Advertisement -

ಥಾಣೆಯ ಜೋಶಿ ಬೇಡೇಕರ್ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿ ಅಮಾನುಷವಾಗಿ ಥಳಿಸುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಹಲ್ಲೆ ನಡೆಸಿದವನ ವಿರುದ್ಧ ಕ್ರಮಕ್ಕೆ ಜನರು ಒತ್ತಾಯಿಸಿದ್ದಾರೆ.

ವಿಡಿಯೊದಲ್ಲಿ, 18 ರಿಂದ 20 ವರ್ಷ ವಯಸ್ಸಿನ ಎಂಟರಿಂದ ಹತ್ತು ಮಂದಿ ಪದವಿ ಕಾಲೇಜು ವಿದ್ಯಾರ್ಥಿಗಳು ಕೆಸರಿನಲ್ಲಿ ತಲೆ ನೆಲಕ್ಕೆ ಹಾಕಿ ಕೈಗಳನ್ನು ಹಿಂದಕ್ಕೆ ಕಟ್ಟಿ ಕುಳಿತಿದ್ದಾರೆ. ಯುವಕರನ್ನು ಹಿರಿಯ ವಿದ್ಯಾರ್ಥಿ ಕೋಲಿನಿಂದ ರಭಸವಾಗಿ ಹೊಡೆಯುವುದನ್ನು ನೋಡಬಹುದಾಗಿದೆ. ಅಪರಿಚಿತ ವಿದ್ಯಾರ್ಥಿಯೊಬ್ಬ ಈ ಆಘಾತಕಾರಿ ಕೃತ್ಯದ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಹಿರಿಯ ಎನ್‌ಸಿಸಿ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಹಿರಿಯ ಕೆಡೆಟ್‌ಗೆ ಉಸ್ತುವಾರಿ ನೀಡಿರುವ ಸಾಧ್ಯತೆ ಇದೆ. ಈ ವ್ಯಾಯಾಮವನ್ನು ಸರಿಯಾಗಿ ಮಾಡಲು ಸಾಧ್ಯವಾಗದ ಕಿರಿಯ ಕೆಡೆಟ್‌ಗಳಿಗೆ ದೊಣ್ಣೆಯಿಂದ ಹೊಡೆಯುತ್ತಿರುವುದು ಕಂಡುಬರುತ್ತಿದೆ.

ದೊಣ್ಣೆಯಿಂದ ಹೊಡೆಯುತ್ತಿರುವ ಹಿರಿಯ ಕೆಡೆಟ್ ಬಂದೋಡ್ಕರ್ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಈತನ ವಿರುದ್ಧ ಶಿಸ್ತು ಹಾಗೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಾಚಾರ್ಯ ಸುಚಿತ್ರಾ ನಾಯಕ್‌ ಪ್ರತಿಕ್ರಿಯಿಸಿದ್ದಾರೆ.

“ನಾನು ಕೂಡಾ ಎನ್‌ಸಿಸಿಯಲ್ಲಿದ್ದೆ. ಆದರೆ ಇಂಥ ಕ್ರೂರ ಶಿಕ್ಷೆ ಎದುರಿಸಿಲ್ಲ. ಹಿರಿಯ ಕೆಡೆಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಲೇಜು ಆಡಳಿತ ಮಂಡಳಿಯನ್ನು ಒತ್ತಾಯಿಸಲಾಗಿದೆ” ಎಂದು ಯುವಸೇನಾ ಮುಖಂಡ ಹಾಗೂ ಮುಂಬೈ ವಿವಿ ಹಿರಿಯ ಸೆನೆಟ್ ಸದಸ್ಯ ಪ್ರದೀಪ್ ಸಾವಂತ್ ಹೇಳಿದ್ದಾರೆ. ಈ ಬಗ್ಗೆ ಕುಲಪತಿಗಳಿಗೂ ಪತ್ರ ಬರೆದು ಹಿರಿಯ ಕೆಡೆಟ್ ಮತ್ತು ಪ್ರಾಧ್ಯಾಪಕರ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -

Related news

error: Content is protected !!