Saturday, April 5, 2025
spot_imgspot_img
spot_imgspot_img

ಬಂಟ್ಟಾಳ ತಾಲೂಕು ಮಟ್ಟಕ್ಕೆ ಆಯ್ಕೆಗೊಂಡ ನಾರ್ಶ ಮೈದಾನ ವಾಲಿಬಾಲ್ ತಂಡ

- Advertisement -
- Advertisement -

ಇಂದು ಸರಕಾರಿ ಪ್ರೌಢಶಾಲೆ ಸುರಿಬೈಲ್ ನಲ್ಲಿ ನಡೆದ ಮಂಚಿವಲಯ ಮಟ್ಟದ ಬಾಲಕಿಯರ ವಿಭಾಗದ  ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನದ ತಂಡವು ಪ್ರಥಮ ಸ್ಥಾನ ಪಡೆದು ಬಂಟ್ಟಾಳ ತಾಲೂಕು ಮಟ್ಟದ ಸ್ಪರ್ಧೆಗೆ  ಆಯ್ಕೆಗೊಂಡಿರುತ್ತದೆ.  ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳ ತಂಡವನ್ನು  ನಿರಂತರ ಶ್ರಮದಿಂದ ತರಬೇತುಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಅಬ್ದುಲ್ ರಫೀಕ್ ಹಾಗೂ ಶಾಲಾ ಶಿಕ್ಷಕ ವೃಂದದವರಿಗೆ ದ ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುಲೈಮಾನ್ ನಾರ್ಶ ರವರು   ಹೃತ್ಪೂರ್ವಕ  ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ಚಿತ್ರದಲ್ಲಿ ತಂಡ ನಾಯಕಿ ಶಿಫಾನ, ತಂಡದ ವ್ಯವಸ್ಥಾಪಕಿ ಭಾರತಿ ಕೈರಂಗಳ್ , ಮುಖ್ಯ ಶಿಕ್ಷಕಿ ಲತಾ, ದೈಹಿಕ ಶಿಕ್ಷಣ ಶಿಕ್ಷಕ ಅಬ್ದುಲ್ ರಫೀಕ್ , ಸಹಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ

- Advertisement -

Related news

error: Content is protected !!