Monday, June 15, 2026
spot_imgspot_img
spot_imgspot_img

ಲಾರಿ ಓಡಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ..!

- Advertisement -
- Advertisement -

ಲಾರಿ ಓಡಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.

ತಮಿಳುನಾಡು ಮೂಲದ ಸೆಲ್ವರಾಜ್ (50) ಎನ್ನುವವರು ಸಾವನ್ನಪ್ಪಿದ ವ್ಯಕ್ತಿ. ಮೃತನು ಮೈಸೂರಿನಿಂದ ಗುಡ್ಲೂರಿಗೆ ಮನೆಯ ದಿನಸಿ ಪದಾರ್ಥಗಳನ್ನು ಲಾರಿಯಲ್ಲಿ ಲೋಡ್ ಮಾಡಿಕೊಂಡು ರಾತ್ರಿ ಹೋಗುತ್ತಿದ್ದನು. ಈ ವೇಳೆ ಬೇಗೂರಿನ ಸರ್ವಿಸ್​ ರಸ್ತೆಯಲ್ಲಿ ಬರುತ್ತಿರುವಾಗ ಲಾರಿ ಚಾಲಕನಿಗೆ ಎದೆ ನೋವು ಕಾಣಿಸಿದೆ. ಕೂಡಲೇ ಲಾರಿಯನ್ನು ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಆದರೆ ನಿಯಂತ್ರಣ ಮಾಡಲಾಗದೇ ಗೂಡ್ಸ್ ಟೆಂಪೋಗೆ ಗುದ್ದಿದ್ದಾನೆ. ಕೊನೆಗೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಲಾರಿ ನಿಂತಿದೆ. ಅಷ್ಟರಲ್ಲಾಗಲೇ ಲಾರಿ ಚಾಲಕನಿಗೆ ಹಾರ್ಟ್ ಅಟ್ಯಾಕ್ ಆಗಿತ್ತು.

ಸದ್ಯ ಲಾರಿ ಅಡ್ಡಾದಿಡ್ಡಿ ಚಲಿಸಿದ್ದರಿಂದ ಯಾವುದೇ ಪ್ರಾಣಹಾನಿ ಆಗಿಲ್ಲ. ಟೆಂಪೋಗೆ, ವಿದ್ಯುತ್ ಕಂಬ ಅಷ್ಟೇ ಹಾನಿಯಾಗಿವೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!