



ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಯುವಕನೋರ್ವ ಲೈಂಗಿಕ ಕಿರುಕುಳ ನಡೆಸಿದ ಘಟನೆ ಕಾಸರಗೋಡುನಲ್ಲಿ ನಡೆದಿದ್ದು, ಆರೋಪಿಯನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ಳೂರು ನಾಟೆಕಲ್ ಇಬ್ರಾಹಿಂ ಬಾದುಷಾ (28) ಎಂದು ಗುರುತಿಸಲಾಗಿದೆ.
ಮಂಗಳೂರಿಗೆ ತೆರಳುತ್ತಿದ್ದ ವೆಸ್ಟ್ ಕೋಸ್ಟ್ ರೈಲಿನಲ್ಲಿ ಘಟನೆ ನಡೆದಿದೆ. ರೈಲು ಮುಂಜಾನೆ 5 ಗಂಟೆ ಸುಮಾರಿಗೆ ನೀಲೇಶ್ವರಕ್ಕೆ ತಲಪಿದಾಗ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದಾನೆ. ವಿದ್ಯಾರ್ಥಿನಿ ಬೊಬ್ಬೆ ಹಾಕಿದಾಗ ಯುವಕ ತಪ್ಪಿಸಿಕೊಂಡಿದ್ದು, ಕೂಡಲೇ ಯುವತಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಕಾಞಾಂಗಾಡ್ ಗೆ ರೈಲು ತಲಪಿದಾಗ ಆತ ಇನ್ನೊಂದು ಬೋಗಿಗೆ ಹತ್ತಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರು. ಪೊಲೀಸರು ಆರೋಪಿಯನ್ನು ಮಂಜೇಶ್ವರ ಠಾಣೆಗೆ ಕೊಂಡೊಯ್ಯುತ್ತಿದ್ದಾಗ ಪೊಲೀಸರಿಂದ ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿಯನ್ನು ಬೆನ್ನಟ್ಟಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.








