Sunday, June 29, 2025
spot_imgspot_img
spot_imgspot_img

ಅನಾನಸು ಹಣ್ಣಿನ ಉಪಯೋಗ

- Advertisement -
- Advertisement -

ಹಳದಿ ವರ್ಣ, ಆಕಾರ ಮತ್ತು ಮುಳ್ಳಿನ ಎಲೆಗಳಿಂದಾಗಿ ಅನೇಕ ವಿಧದ ಫಲಗಳ ನಡುವೆಯೂ ಗುರುತಿಸಿ ಕೊಳ್ಳುವಂತಹ ಹಣ್ಣು ಅನಾನಸ್. ಮತ್ತು ಮಧುರವಾದ ಪರಿಮಳದಿಂದಾಗಿ ಇದು ಸಾಕಷ್ಟು ಆಕರ್ಷಣೀಯವಾಗಿದೆ. ಹುಳಿ ಮಿಶ್ರಿತ ಸಿಹಿ ಇರುವ ಈ ಹಣ್ಣಿನಿಂದ ಜ್ಯೂಸ್, ಸಲಾಡ್ ಮತ್ತು ಇತರ ತಿನಿಸುಗಳನ್ನು ತಯಾರಿಸುವರು. ಇದು ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ಕೆಲವು ವೈದ್ಯಕೀಯ ಚಿಕಿತ್ಸೆಗಳಿಗಾಗಿಯೂ ಅನಾನಸನ್ನು ಬಳಸಲಾಗುತ್ತದೆ. ಇದರಲ್ಲಿ ಜೀರೋ ಕೊಲೆಸ್ಟ್ರಾಲ್, ವಿಟಮಿನ್ ಎ, ಬಿ, ಸಿ, ಪೊಟಾಷ್ಯಿಯಂ, ಮ್ಯಾಂಗನೀಸ್, ಸತು ಹಾಗೂ ದೇಹಕ್ಕೆ ಅಗ್ಯತವಾದ ಇತರ ಖನಿಜಾಂಶಗಳಿದ್ದು ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದಾಗಿದೆ.

ಅನಾನಸು ಹಣ್ಣು ಆ್ಯಂಟಿ ಆ್ಯಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಆ್ಯಕ್ಸಿಡೇಟಿವ್‌ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಅನಾನಸು ಹೊಂದಿದೆ. ಇದು ಆ್ಯಂಟಿ ಆಕ್ಸಿಡೆಂಟ್‌ಗಳಾದ ಫ್ಲೇವನಾಯ್ಡ್ಸ್ ಮತ್ತು ಫೇನೋಲಿಕ್‌ ಆ್ಯಸಿಡ್‌ಗಳನ್ನು ಹೊಂದಿದೆ. ಅನಾನಸು ದೀರ್ಘಾವದಿಯ ಪರಿಣಾಮ ನಿವಾರಿಸುತ್ತದೆ. ಇದರಲ್ಲಿರುವ ರೋಗ ನಿರೋಧಕ ಗುಣಗಳು ಡಯಾಬಿಟೀಸ್‌ ಮತ್ತು ಹೃದಯ ಸಂಬಂಧಿ ರೋಗಗಳನ್ನು ಸಾಧ್ಯತೆ ಕಡಿಮೆ ಮಾಡುತ್ತದೆ.

ವಿಟಮಿನ್‌ ಸಿ, ಆ್ಯಂಟಿ ಆಕ್ಸಿಡೆಂಟ್‌ಗಳು, ಮಿನರಲ್‌ಗ‌ಳಾದ ಪೋಟ್ಯಾಸಿಯಂ ಮತ್ತು ಮ್ಯಾಂಗನೀಸ್‌ಗಳಿಂದ ಅನಾನಸು ಶ್ರೀಮಂತವಾಗಿದೆ. ಇದರಲ್ಲಿ ಜೀವಕೋಶಗಳು ಡ್ಯಾಮೇಜ್‌ ಆಗುವುದನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಅನಾನಸ್‌ ಹಣ್ಣುಗಳು ಕಣ್ಣುಗಳ ಸ್ನಾಯು ಕ್ಷೀಣತೆಯ ಅಪಾಯವನ್ನು ಕಡಿಮೆ ಮಾಡುತ್ತವೆ. ಹಣ್ಣಿನಲ್ಲಿರುವ ಬೀಟಾ-ಕ್ಯಾರೊಟಿನ್‌ ಅಂಶಗಳು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ.

ಅನಾನಸ್ ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಇದು ನಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯಮಾಡುತ್ತದೆ. ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡರೆ ದೇಹ ಮತ್ತು ಮೂಳೆಗಳನ್ನು ಬಲಿಷ್ಠಗೊಳಿಸಲು ಸಹಾಯ ಮಾಡುತ್ತದೆ. ಸತು, ತಾಮ್ರ ಮತ್ತು ಕ್ಯಾಲ್ಸಿಯಂನೊಂದಿಗೆ ಸಂಯೋಜನೆಗೊಂಡಿರುವುದರಿಂದ ದೇಹ ಪೋಷಕಾಂಶಗಳನ್ನು ಸುಲಭವಾಗಿ ಗ್ರಹಿಸುತ್ತದೆ.

ಅನಾನಸ್ ಸೇವಿಸುವುದರಿಂದ ಹಲ್ಲು ಮತ್ತು ಒಸಡುಗಳು ಗಟ್ಟಿಯಾಗುತ್ತವೆ. ಪೈನಾಪಲ್ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.ಅನಾನಸ್‌ನಲ್ಲಿ ವಿಟಮಿನ್ ಬಿ ಇದ್ದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿ.ಅನಾನಸ್‌ನಲ್ಲಿ ಬೀಟಾ ಕೆರೋಟಿನ್ ಇದ್ದು, ಇದು ಅಸ್ತಮಾ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

- Advertisement -

Related news

error: Content is protected !!