Monday, June 8, 2026
spot_imgspot_img
spot_imgspot_img

ಅಕ್ರಮ ಸಂಬಂಧ ಅನುಮಾನದ ಮೇಲೆ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದ ಪತಿ..!

- Advertisement -
- Advertisement -

ಅಕ್ರಮ ಸಂಬಂಧ ಶಂಕೆಯ ಮೇಲೆ ಪತಿ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.

ಹತ್ಯೆಗೈದ ವ್ಯಕ್ತಿ ಮಹದೇವಯ್ಯ (45) ಹಾಗೂ ಪತ್ನಿ ಲಕ್ಷ್ಮಮ್ಮ (40) ಎಂದು ಗುರುತಿಸಲಾಗಿದೆ.

ಮಹದೇವಯ್ಯ ಆನೇಕಲ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಲಕ್ಷ್ಮಮ್ಮ ಗಾರೆ ಕೆಲಸ ಮಾಡಿಕೊಂಡಿದ್ದರು ,ಇವರಿಗೆ ಆರು ಜನ ಮಕ್ಕಳಿದ್ದರು. ಗಾರೆ ಕೆಲಸ ಮಾಡುವ ವ್ಯಕ್ತಿಯ ಜೊತೆ ಲಕ್ಷ್ಮಮ್ಮ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪತಿ ಶಂಕಿಸಿದ್ದು, ಈ ಬಗ್ಗೆ ಹಲವು ಬಾರಿ ಲಕ್ಷ್ಮಮ್ಮ ಹಾಗೂ ಮಹದೇವಯ್ಯ ನಡುವೆ ಗಲಾಟೆ ನಡೆದಿತ್ತು.

ಈ ವಿಚಾರ ಇಡೀ ತಮ್ಮನಾಯಕನಹಳ್ಳಿ ಗ್ರಾಮದ ಜನಕ್ಕೆ ತಿಳಿದಿತ್ತು. ಜನರು ಅಕ್ರಮ ಸಂಬಂಧದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ಮನನೊಂದ ಮಹದೇವಯ್ಯ ಪತ್ನಿ ಲಕ್ಷ್ಮಮ್ಮ ಮನೆಯಲ್ಲಿ ಮಲಗಿದ್ದಾಗಲೇ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!