Friday, June 19, 2026
spot_imgspot_img
spot_imgspot_img

ಮದ್ಯ ಸೇವನೆಗೆ ಹಣ ಕೊಡಲಿಲ್ಲವೆಂದು ಪತ್ನಿಯನ್ನೇ ಕೊಂದ ಪತಿ..!

- Advertisement -
- Advertisement -

ಕುಡಿಯುದಕ್ಕೆ ಹಣ ಕೊಡಲಿಲ್ಲವೆಂದು ಪತ್ನಿಯನ್ನೇ ಹೊಡೆದು ಕೊಂದಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ನಡೆದಿದೆ.

ಕೊಲೆಗೈದ ವ್ಯಕ್ತಿ ಪತಿ ಬಸವರಾಜ್ ,ಹತ್ಯೆಯಾದ ಮಹಿಳೆ ಸುನೀತಾ (28)

ಪರಸ್ಪರ ಪ್ರೀತಿಸಿ ಲಿಂಗಸಗೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದ ದಂಪತಿಗಳು, ಮದುವೆಯಾಗಿ‌ ಕೆಲ ದಿನಗಳ ಕಾಲ ಮಾತ್ರ ಸುಖಸಂಸಾರ ನಡೆಸಿದ್ದಾರೆ. ಕುಡಿತದ ಚಟಕ್ಕೆ ದಾಸನಾಗಿದ್ದ ಬಸವರಾಜ್, ಕುಡಿದು ಬಂದು ದಿನನಿತ್ಯ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ. ಕುಡಿಯುವುದಕ್ಕೆ ಹಣ ನೀಡುವಂತೆ ಪೀಡಿಸುತ್ತಿದ್ದ ಪತಿರಾಯ. ಎಷ್ಟು ದಿನಾಂತ ಕೊಟ್ಟಾಳು? ಕೂಲಿ ಮಾಡಿ ಕೂಡಿಟ್ಟ ಹಣವೆಲ್ಲ ಗಂಡ ಬಸವರಾಜನ ಕುಡಿತಕ್ಕೆ ಹೋಗುತ್ತಿದ್ದರಿಂದ ಸಂಸಾರ ನಡೆಸುವುದೇ ಕಷ್ಟವಾಗಿದೆ.

ಎಂದಿನಂತೆ ನಿನ್ನೆ ಸಂಜೆಯೂ ಸಹ ಜಮೀನಿನಲ್ಲಿ ಬೆಳೆಗೆ ನೀರು ಕಟ್ಟುವಾಗ ಇಬ್ಬರ ನಡುವೆ ಗಲಾಟೆಯಾಗಿದೆ. ಜಮೀನಿನಲ್ಲಿ ಕುಡಿಯುವುದಕ್ಕೆ ಹಣ ಕೊಡುವಂತೆ ಪತ್ನಿಯೊಂದಿಗೆ ಜಗಳಕ್ಕಿಳಿದಿರುವ ಪತಿ. ಈ ವೇಳೆ ಹಣ ಕೊಡಲು ಒಪ್ಪದ್ದಕ್ಕೆ ಇಬ್ಬರ ನಡುವೆ ಜಮೀನಿನಲ್ಲಿ ಜಗಳವಾಗಿದೆ ಈ ವೇಳೆ ಕೋಪಗೊಂಡು ಪತ್ನಿಯನ್ನ ಹತ್ಯೆ ಮಾಡಿದ್ದಾನೆ. ಈ ಘಟನೆಯ ಬಗ್ಗೆ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!