Saturday, June 28, 2025
spot_imgspot_img
spot_imgspot_img

ಕಾರ್ಕಳ: ಗೂಡ್ಸ್ ಟೆಂಪೋ ಢಿಕ್ಕಿ ; ಮಹಿಳೆ ಮೃತ್ಯು

- Advertisement -
- Advertisement -

ಕಾರ್ಕಳ: ರಸ್ತೆಯ ಡಿವೈಡರ್ ದಾಟಲು ಕಾಯುತ್ತಿದ್ದ ವೇಳೆ ಗೂಡ್ಸ್ ಟೆಂಪೋ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಾರ್ಕಳದ ಕುಂಟಲ್ಪಾಡಿಯಲ್ಲಿ ನಡೆದಿದೆ.

ಕಸಬಾದ ಹಿರಿಯಂಗಡಿ ನಿವಾಸಿ ಸ್ವಸ್ತಿ (55) ಅವರು ಬೈಪಾಸ್ ರಸ್ತೆಯಲ್ಲಿ ಶಿವತಿಕೆರೆ ಕಡೆಯಿಂದ ಕುಂಟಲ್ಪಾಡಿ ಕೃಷ್ಣ ಕ್ಷೇತ್ರದ ಕಡೆಗೆ ನಡೆದುಕೊಂಡು ತೆರಳುತ್ತಿದ್ದರು. ಹಿರಿಯಂಗಡಿ ವೆಂಕಟೇಶ ಇಂಡಸ್ಟ್ರೀಸ್ ಎದುರುಗಡೆ ರಸ್ತೆಯ ಮಧ್ಯಭಾಗದಲ್ಲಿರುವ ಡಿವೈಡರ್ ಬಳಿ ರಸ್ತೆ ದಾಟಲು ನಿಂತುಕೊಂಡಿದ್ದಾಗ ಪುಲ್ಕೇರಿ ಕಡೆಯಿಂದ ಬಂಗ್ಲೆಗುಡ್ಡೆ ಕಡೆಗೆ ಸುಧಾಕರ ಅವರು ಚಲಾಯಿಸುತ್ತಿದ್ದ 407 ಗೂಡ್ಸ್ ಟೆಂಪೋ ಸ್ವಸ್ತಿ ಅವರಿಗೆ ಢಿಕ್ಕಿ ಹೊಡೆದಿತ್ತು. ಮಹಿಳೆಯ ತಲೆಗೆ ತೀವ್ರತರ ಪೆಟ್ಟಾಗಿತ್ತು. ಅವರನ್ನು ಸ್ಥಳೀಯರು ಟೆಂಪೋ ಚಾಲಕನ ಸಹಾಯದಿಂದ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸುದ್ದರು.

ಹೆಚ್ಚಿನ ಚಿಕಿತ್ಸೆ ಅವಶ್ಯ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮಹಿಳೆ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!