Sunday, June 29, 2025
spot_imgspot_img
spot_imgspot_img

ಕಾರಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು ,ಇನ್ನೋರ್ವ ಗಂಭೀರ..!

- Advertisement -
- Advertisement -

24 ಲಕ್ಷ ರೂಪಾಯಿ ಬೆಲೆ ಬಾಳುವ ಬೈಕ್ ಒಂದರ ಸ್ಪೀಡ್ ತೋರಿಸಲು ಹೋಗಿ ಯುವಕನೋರ್ವ ಜೀವ ಕಳಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತಪಟ್ಟಬೈಕ್ ಸವಾರ ಶೇಕ್ ನಾಸಿರ್ (32) ಹಾಗೂ ಗಂಭೀರ ಗಾಯಗೊಂಡ ಹಿಂಬದಿ ಸವಾರ ಸೈಯದ್ ಮುದಾಸಿರ್ ಎಂದು ಗುರರುತಿಸಲಾಗಿದೆ.

ಬಿಎಂಡಬ್ಲ್ಯೂ ಆರ್ ಆರ್ 1000 ಸಿಸಿ ಬೈಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸಾವನ್ನಪ್ಪಿದ್ದಾರೆ. ಶೇಕ್ ನಾಸಿರ್ ಮತ್ತು ಸೈಯದ್ ಮುದಾಸಿರ್ ಇಬ್ಬರು ಬೈಕ್‌ ಡೀಲರ್ಸ್. ಮುದಾಸಿರ್ ಓರ್ವ ಗ್ರಾಹಕನಿಗೆ ಬೈಕ್ ನೋಡುತ್ತಿದ್ದು, ಅದೇ ಬೈಕ್ ಪರ್ಮಾರ್ಫೆನ್ಸ್ ತೋರಿಸಲು ಶೇಕ್ ನಾಸಿರ್ ಆತನ ಬಳಿಗೆ ಬಂದಿದ್ದನು. ಮಾಧವ ಪಾರ್ಕ್ ಕಡೆಯಿಂದ ಅಶೋಕ ಪಿಲ್ಲರ್ ಕಡೆ ಬರುತ್ತಿದ್ದರು. ಈ ವೇಳೆ ಕನಕಪಾಳ್ಯ ಕಡೆಯಿಂದ ಬರ್ತಿದ್ದ ಬಲೆನೊ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ.

ಬೈಕ್‌ ಸವಾರರು ಹೆಲ್ಮೆಟ್‌ ಕೂಡ ಧರಿಸಿರಲಿಲ್ಲ. ಕುತ್ತಿಗೆಗೆ ತೀವ್ರ ಏಟು ಬಿದ್ದ ಕಾರಣ ಸ್ಥಳದಲ್ಲೇ ನಾಸಿರ್‌ ಸಾವನ್ನಪ್ಪಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮುದಾಸಿರ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಘಟನೆಯ ಬಗ್ಗೆ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!