Wednesday, August 19, 2026
spot_imgspot_img
spot_imgspot_img

ಪಡುಬಿದ್ರಿ: ಮೀನುಗಾರಿಕೆಗೆ ಬಲೆ ಬೀಸುತ್ತಿದ್ದ ಯುವಕ ಸಮುದ್ರದ ಅಲೆಗೆ ಸಿಲುಕಿ ಮೃತ್ಯು…!

- Advertisement -
- Advertisement -

ಪಡುಬಿದ್ರಿ: ಮೀನುಗಾರಿಕೆಗೆ ಬಲೆ ಬೀಸುತ್ತಿದ್ದ ಯುವಕ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟ ಘಟನೆ ಕಾಡಿಪಟ್ಟ ಬೀಚ್ ಬಳಿ ನಡೆದಿದೆ.

ಪಡುಬಿದ್ರಿ ವಸಂತ ಪಾದೆಬೆಟ್ಟು ಯಾನೆ ಬಡ್ಡು (32) ಮೃತ ಯುವಕ ಎಂದು ತಿಳಿದು ಬಂದಿದೆ. ಮೃತ ವಸಂತ್ ಪಡುಬಿದ್ರಿಯ ಭುವನೇಂದ್ರ ಅವರ ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಶುಕ್ರವಾರ ಬೆಳಗ್ಗೆ, ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮೀನುಗಾರಿಕೆಗಾಗಿ ಕೈರಂಪಣಿಯ ಬಲೆಯ ಇನ್ನೊಂದು ತುದಿಯನ್ನು ಹಿಡಿದುಕೊಂಡು ಮೀನುಗಾರಿಕೆ ಮಾಡುತ್ತಿದ್ದ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ಆಯತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!