


ಬೆಂಗಳೂರು: ಕೆಆರ್ ಪುರಂ ತ್ರಿವಳಿ ಕೊಲೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ಶ್ವೇತಾ, ತನ್ನ ಲವ್ವರ್ ಕೆನತ್ ವಿರುದ್ಧವೇ ಸಾಕ್ಷಿ ಹೇಳಲು ಮುಂದೆ ಬಂದಿದ್ದಾಳೆ.
ನಾನು ಮಾಫಿ ಸಾಕ್ಷಿ(ಅಪ್ರೂವರ್) ಆಗಲು ಸಿದ್ಧವಿದ್ದು, ನನ್ನ ಅರ್ಜಿಯನ್ನು ಪರಿಗಣಿಸಿ ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾಳೆ.
ಈ ಸಂಬಂಧ ಶ್ವೇತಾ 29ನೇ ಎಸಿಜೆಎಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಪ್ರಕರಣದಲ್ಲಿ ತಾನು ಭಾಗಿಯಾಗಿದ್ದೇನೆ ಎಂದು ಒಪ್ಪಿಕೊಂಡಿರುವ ಶ್ವೇತಾ, ಕೊಲೆ ನಡೆದ ವೇಳೆ ನಾನು ಅಲ್ಲಿದ್ದೆ. ಆದರೆ, ಚಾಕುವಿನಿಂದ ಯಾರಿಗೂ ಚುಚ್ಚಿಲ್ಲ. ನೇರವಾಗಿ ನಾನು ಕೊಲೆ ಮಾಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಕೊಲೆ ಮಾಡುವ ತೀರ್ಮಾನ ಕೆನತ್‌ನದ್ದಾಗಿತ್ತು. ಆತನೇ ಕೊಲೆ ಮಾಡಿದ್ದಾನೆ. ಹೀಗಾಗಿ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಕೆನತ್ ವಿರುದ್ಧ ಸಾಕ್ಷಿ ಹೇಳಲು ಸಿದ್ಧಳಿದ್ದೇನೆ ಎಂದು ಶ್ವೇತಾ ಕೋರ್ಟ್‌ಗೆ ತಿಳಿಸಿದ್ದಾರೆ.
ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ತನಿಖೆ ಪ್ರಗತಿಯಲ್ಲಿದ್ದು, ಕೆಲವು ಫೊರೆನ್ಸಿಕ್ ವರದಿಗಳು ಬರಬೇಕಿದೆ ಎಂದು ಪೊಲೀಸರು ಕೋರ್ಟ್‌ಗೆ ತಿಳಿಸಿದ್ದಾರೆ. ಆದ್ದರಿಂದ ಫೋರೆನ್ಸಿಕ್ ವರದಿಗಳು ಬಂದ ಬಳಿಕ ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಹೀಗಾಗಿ ಚಾರ್ಜ್‌ಶೀಟ್ ಸಲ್ಲಿಕೆಯಾದ ನಂತರ ಮಾಫಿ ಸಾಕ್ಷಿಯಾಗುವ ಅರ್ಜಿ ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಶ್ವೇತಾ ಸಲ್ಲಿಸಿದ್ದ ಅರ್ಜಿಯನ್ನು ಸದ್ಯಕ್ಕೆ ಇತ್ಯರ್ಥಪಡಿಸಿರುವ ನ್ಯಾಯಾಲಯ, ಚಾರ್ಜ್‌ಶೀಟ್ ಬಳಿಕ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದಾಗಿ ತಿಳಿದುಬಂದಿದೆ.








