Sunday, June 29, 2025
spot_imgspot_img
spot_imgspot_img

ನ್ಯೂ ಇಯರ್​ ಪಾರ್ಟಿಗೆ 193 ಕೋಟಿ ಮೌಲ್ಯದ ಮದ್ಯ ಸೇಲ್

- Advertisement -
- Advertisement -

2024 ನೇ ಹೊಸ ವರ್ಷ ಬರಮಾಡಿಕೊಳ್ಳುವ ಸಂಭ್ರಮಾಚರಣೆಯಲ್ಲಿ ಮದ್ಯದ ಕಿಕ್ ಕೂಡ ಜೋರಾಗಿತ್ತು. ನ್ಯೂ ಇಯರ್ ಗೆ ಸರ್ಕಾರದ ಬೊಕ್ಕಸಕ್ಕೆ ಎಣ್ಣೆ ಕಾಸು ಭಾರಿ ಪ್ರಮಾಣದಲ್ಲಿ ಹರಿದು ಬಂದಿದೆ. 2023ರ ಕೊನೆಯ ದಿನವಾದ ಭಾನುವಾರದಂದು 193 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಈ ಮೂಲಕ ಒಂದೇ ದಿನ ಭರ್ಜರಿ ಲಿಕ್ಕರ್ ಗಳು ಸೇಲ್ ಆಗಿದೆ.

ಡಿಸೆಂಬರ್ ತಿಂಗಳಲ್ಲಿ ಇಂಡಿಯನ್ ಮೇಡ್ ಲಿಕ್ಕರ್ 3,07,953 ಬಾಕ್ಸ್‌, ಬಿಯರ್ 1,95,005 ಬಾಕ್ಸ್ ಮಾರಾಟವಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 2,611 ಕೋಟಿ ಆದಾಯ ಬಂದಿತ್ತು. ಈ ವರ್ಷ ಡಿಸೆಂಬರ್ ತಿಂಗಳಲ್ಲಿ 3 ಸಾವಿರ ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಮದ್ಯ ಮಾರಾಟ ಹೆಚ್ಚಳವಾಗಿದೆ. ಏಳು ದಿನದಲ್ಲಿ 1,070 ಕೋಟಿ ಲಿಕ್ಕರ್ ಸೇಲ್ ಆಗಿದ್ದು, ಡಿಸೆಂಬರ್ 23 ರಿಂದ ಡಿಸೆಂಬರ್ 31 ರವರೆಗೂ ಐಎಂಎಲ್ ಲಿಕ್ಕರ್ ಒಟ್ಟು 22.2 ಲಕ್ಷ ಪೆಟ್ಟಿಗೆ ಮಾರಾಟವಾಗಿದೆ. ಇದರಿಂದ ಒಟ್ಟು 900ಕೋಟಿ ಆದಾಯ ಸರ್ಕಾರದ ಬೊಕ್ಕಸಕ್ಕೆ ಹರಿದು ಬಂದಿದೆ.

- Advertisement -

Related news

error: Content is protected !!