Saturday, November 21, 2026
spot_imgspot_img
spot_imgspot_img

ಹಾಸನ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್‌ ಸವಾರ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

- Advertisement -
- Advertisement -

ಹಾಸನ: ಸಕಲೇಶಪುರದ ಜಾತಹಳ್ಳಿ ಗ್ರಾಮದಲ್ಲಿ ರಸ್ತೆ ದಾಟಲು ನಿಂತಿದ್ದ ಕಾಡಾನೆ ಹಿಂಡಿಗೆ ಬೈಕ್‌ ಅಡ್ಡ ಬಂದಿದ್ದಕ್ಕೆ ರೊಚ್ಚಿಗೆದ್ದ ದೈತ್ಯಾಕಾರದ ಆನೆಯೊಂದು ಘೀಳಿಡುತ್ತ ಸವಾರರ ಮೇಲೆ ದಾಳಿಗೆ ಮುಂದಾಗಿದೆ.

ಕಾಡಾನೆಗಳು ರಸ್ತೆ ದಾಟಲು ನಿಂತಿದ್ದವು. ಈ ವೇಳೆ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡುತ್ತಿದ್ದವು. ವಾಹನ ಸಂಚಾರ ನಿಂತ ತಕ್ಷಣ ಕಾಡಾನೆಗಳು ರಸ್ತೆ ದಾಟಲು ಮುಂದಾಗಿವೆ. ಈ ವೇಳೆ ಬೈಕ್‌ ಬಂದಿದ್ದು, ಸಿಟ್ಟಿಗೆದ್ದ ಕಾಡಾನೆ ಸವಾರರ ಮೇಲೆ ದಾಳಿ ನಡೆಸಲು ಮುಂದಾಗಿದೆ. ಅದೃಷ್ಟವಶಾತ್‌ ಕೂದಲೆಳೆ ಅಂತರದಲ್ಲಿ ಬೈಕ್‌ ಸವಾರ ಪಾರಾಗಿದ್ದಾನೆ.

ನಂತರ ರಸ್ತೆ ಕಾಡಾನೆಗಳು ರಸ್ತೆ ದಾಟಿ ಹೋಗಿವೆ. ಕಾಡಾನೆ ಘೀಳಿಟ್ಟು ಅಟ್ಯಾಕ್ ಮಾಡಲು ಮುಂದಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಇಟಿಎಫ್ ಸಿಬ್ಬಂದಿ ಆಗಮಿಸಿದ್ದಾರೆ.

ಕುಮ್ಕಿ ಆನೆಗಳು ಇಲ್ಲದೆ ಶೆಟ್ಟಿಹಳ್ಳಿ ಗ್ರಾಮದಿಂದ ಕೊಗೊಡು ಗ್ರಾಮದವರೆಗೂ 40 ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇಟಿಎಫ್ ಸಿಬ್ಬಂದಿ ಅಟ್ಟಿದ್ದಾರೆ.

ಆರ್‌ಎಫ್‌ಓ ಯತೀಶ್ ನೇತೃತ್ವದದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ನೂರು ಜನ ಸಿಬ್ಬಂದಿ, ಆರು ದ್ರೋಣ್, ಪಟಾಕಿಗಳನ್ನು ಬಳಿಸಿ ಕೊಗೊಡು ಗ್ರಾಮದವರೆಗೂ ಕಾಡಾನೆಗಳನ್ನು ಓಡಿಸಲಾಗಿದೆ. ಮಧ್ಯರಾತ್ರಿ 3 ಗಂಟೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅರ್ಧದಷ್ಟು ಸಿಬ್ಬಂದಿಯನ್ನು ವಿಶ್ರಾಂತಿಗೆ ಕಳುಹಿಸಲಾಗಿತ್ತು. ಉಳಿದ ಸಿಬ್ಬಂದಿಯೊಂದಿಗೆ ಇಂದು (ನ.21) ಬೆಳಗ್ಗೆಯವರೆಗೂ ಕಾರ್ಯಾಚರಣೆ ನಡೆಸಲಾಗಿದೆ.

- Advertisement -

Related news

error: Content is protected !!