- Advertisement -
- Advertisement -




ಕಾಸರಗೋಡು: ಉಸಿರಾಟ ಮತ್ತು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಎರಡು ತಿಂಗಳ ಗರ್ಭಿಣಿ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆ ಕಳಚನದುಕ್ಕಂ ಮೂಲದ ಸಿದ್ದಿಕ್ ಎಂಬವರ ಪತ್ನಿ ಫೌಜಿಯಾ (35) ಎಂದು ಗುರುತಿಸಲಾಗಿದೆ.
ಎರಡು ತಿಂಗಳ ಗರ್ಭಿಣಿಯಾಗಿರುವ ಫೌಜಿಯಾ ಕಾಞಂಗಾಟ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾತ್ರಿ ತೀವ್ರ ಹೊಟ್ಟೆನೋವು ಮತ್ತು ಉಸಿರಾಟದ ತೊಂದರೆಯಿಂದ ಮಂಗಳೂರಿಗೆ ಕರೆದೊಯ್ಯಲಾಯಿತು. ಉಪ್ಪಳ ತಲುಪಿದಾಗ ಪರಿಸ್ಥಿತಿ ಬಿಗಡಾಯಿಸಿತು. ನಂತರ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯತಿದ್ದ ವೇಳೆ ಮೃತಪಟ್ಟಿದ್ದರು.
- Advertisement -








