- Advertisement -
- Advertisement -
ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡ ಅಯ್ಯಪ್ಪ ಮಾಲಾಧಾರಿಗಳಿಂದ ಟಿ.ಟಿ ವಾಹನ ರಸ್ತೆಗೆ ಪಲ್ಟಿ ಹೊಡೆದ ಪರಿಣಾಮ ಹಲವು ಮಂದಿ ಗಾಯಗೊಂಡ ಘಟನೆ ವಿಟ್ಲದ ಚಂದಳಿಕೆ ಎಂಬಲ್ಲಿ ನಡೆದಿದೆ.
ಶಬರಿಮಲೆಯಿಂದ ವಿಟ್ಲ ರಸ್ತೆ ಮೂಲಕ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಚಂದಳಿಕೆ ಅಪಾಯಕಾರಿ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ.
ಟಿ.ಟಿ ವಾಹನದಲ್ಲಿದ್ದ ಆರು ಮಂದಿ ಮಾಲಾಧಾರಿಗಳು ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಇವರೆಲ್ಲ ಉಜಿರೆ ಮೂಲದವರಾಗಿದ್ದು, ಶಬರಿಮಲೆ ತೆರಳಿ ಹಿಂತಿರುಗುತ್ತಿದ್ದರು.
- Advertisement -