Sunday, October 18, 2026
spot_imgspot_img
spot_imgspot_img

ಕಡಬದ ಕುಂತೂರು ಸಮೀಪ ಗಾಂಜಾ ಸೇವಿಸಿ ನಶೆಯಲ್ಲಿದ್ದ ಆರೋಪಿ ಪೊಲೀಸರ ವಶಕ್ಕೆ.!

- Advertisement -
- Advertisement -

ಕಡಬ:  ಗಾಂಜಾ ಸೇವಿಸಿ ನಶೆಯಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಘಟನೆ ಕಡಬ ತಾಲೂಕಿನ ಕುಂತೂರು ಎಂಬಲ್ಲಿ ನಡೆದಿದೆ.

ಗಸ್ತು ತಿರುಗುತ್ತಿದ್ದ ಪೊಲೀಸರು ಕಡಬದ ಕುಂತೂರು ಸಮೀಪ ಬೈಕ್ ಒಂದನ್ನು ಪರಿಶೀಲನೆ ನಡೆಸಿದಾಗ ಜುನೈದ್ (19) ಎಂಬ ಯುವಕ ಗಾಂಜಾ ಸೇವಿಸಿ ನಶೆಯಲ್ಲಿರುವುದು ತಿಳಿದುಬಂದಿದೆ. ಈತನನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ಗಾಂಜಾ ಸೇವಿಸಿರುವುದನ್ನು ದೃಢಪಡಿಸಿಕೊಂಡಿದ್ದಾರೆ.

ನಂತರ ಆರೋಪಿಯನ್ನು ದಸ್ತಗಿರಿ ಮಾಡಿರುವ ಪೊಲೀಸರು, ಬೈಕ್​ನ್ನು ವಶಕ್ಕೆ ತೆಗೆದುಕೊಂಡು ಎನ್​ಡಿಪಿಎಸ್​​ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!