Sunday, June 29, 2025
spot_imgspot_img
spot_imgspot_img

ತಂದೆ ಮಗನ ನಡುವೆ ಗಲಾಟೆ; ತಂದೆಯನ್ನೇ ಕೊಲೆಗೈದ ಮಗ..!

- Advertisement -
- Advertisement -

ತಂದೆ ಮಗನ ನಡುವಿನ ಜಗಳದಲ್ಲಿ ಮಗ ತಂದೆಯನ್ನು ಕೊಲೆ ಮಾಡಿದ ಘಟನೆ ಹಾಸನ ತಾಲ್ಲೂಕಿನ, ಪೂಮಗಾಮೆ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿ ರವಿ (45) ಹಲ್ಲೆ ಮಾಡಿದ ಮಗ ಸಂದೀಪ (24) ಎಂದು ಗುರುತಿಸಲಾಗಿದೆ.

ಅಪ್ಪ-ಮಗ ಕುಡಿತದ ದಾಸರಾಗಿದ್ದು, ರವಿ-ಸಂದೀಪ ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದಿದ್ದರು. ಕುಡಿದ ಮತ್ತಿನಲ್ಲಿ ತಂದೆ ಮಗನ ನಡುವೆ ಜಗಳ ಶುರುವಾಗಿದೆ. ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸಂದೀಪ ಅಪ್ಪನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಲ್ಲೆ ವೇಳೆ ರವಿ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾನೆ. ಇಂದು ಬೆಳಗ್ಗೆ ನೋಡಿದಾಗ ರವಿ ಸಾವನ್ನಪ್ಪಿದ್ದನು. ತಂದೆ ಸಾವಿನ ನಂತರ ಮಗ ಸಂದೀಪ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Related news

error: Content is protected !!