Sunday, June 14, 2026
spot_imgspot_img
spot_imgspot_img

ಕೆಲಿಂಜ ಶ್ರೀ ಉಳ್ಲಾಲ್ತಿ ಅಮ್ಮನವರ ಮೆಚ್ಚಿಜಾತ್ರೆ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ

- Advertisement -
- Advertisement -

ಇತಿಹಾಸ ಪ್ರಸಿದ್ಧ ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಫೆ. 14 ರಂದು ವರ್ಷಾವಧಿ ಮೆಚ್ಚಿ ಜಾತ್ರಯು ನಡೆಯಲಿದೆ. ಈ ಪ್ರಯುಕ್ತ ಇಂದು ಪುಂಡಿಕಾಯಿ ಮನೆಯಲ್ಲಿ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು. ಅನಂತಕೋಡಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಪುಂಡಿಕಾಯಿ ಮನೆಯಲ್ಲಿ ಗೊನೆ ಮುಹೂರ್ತ ನಡೆಯಿತು.

ಈ ಸಂದರ್ಭದಲ್ಲಿ ಜಾತ್ರೋತ್ಸವದ ತಯಾರಿ ಬಗ್ಗೆ ಯಾವುದೇ ಸಲಹೆ ಸೂಚನೆ, ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ವಿಷಯ ಪ್ರಸ್ತಾಪಿಸುವುದಾದರೆ ಗೊನೆ ಕಡಿಯುವುದರ ಮೊದಲಿಗೆ ಪ್ರಸ್ತಾಪಿಸಬೇಕು ಗೊನೆ ಮುಹೂರ್ತದ ಬಳಿಕ ಯಾರೂ ಯಾವುದೇ ವಿಚಾರ ಪ್ರಸ್ತಾಪಿಸುವಂತಿಲ್ಲ. ಇಂತಹ ಆಚಾರ ವಿಚಾರ ನಂಬಿಕೆ ಹಿಂದಿನ ಕಾಲದಿಂದಲೂ ಪಾಲಿಸಿಕೊಂಡು ಬರುತ್ತಿರುವ ಈ ಪದ್ದತಿಯನ್ನು ಇಂದಿಗೂ ಅನುಸರಿಸಿಕೊಂಡು ಬಂದಿರುವುದು ಈ ಕ್ಷೇತ್ರದ ಗೊನೆಮುಹೂರ್ತದ ವಿಶೇಷತೆ.

ಗೊನೆಮುಹೂರ್ತ ಕಾರ್ಯಕ್ರಮದಲ್ಲಿ ಮೊಕ್ತೇಸರರು, ಊರಿನ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -

Related news

error: Content is protected !!