Thursday, June 18, 2026
spot_imgspot_img
spot_imgspot_img

ವಿಟ್ಲ : ಸರಕಾರಿ ಬೀಗಮುದ್ರೆ ಹಾಕಿರುವ ಜಾಗದಲ್ಲಿ ತಂಡದಿಂದ ಅಕ್ರಮ ಪ್ರವೇಶ, ಸಾರ್ವಜನಿಕರಿಂದ ದೂರು

- Advertisement -
- Advertisement -

ವಿಟ್ಲ : ಸರಕಾರಿ ಬೀಗಮುದ್ರೆ ಹಾಕಿರುವ ಜಾಗದಲ್ಲಿ ತಂಡವೊಂದು ಅಕ್ರಮ ಪ್ರವೇಶ ಮಾಡಿ ಫುಟ್ಬಾಲ್ ಆಟವಾಡುವ ನೆಪದಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಾರೆ ಎಂದು ನಾಗರಿಕರು ದೂರು ಹಾಗೂ ಸೂಕ್ತ ಕ್ರಮಕ್ಕೆ ಆಗ್ರಹ ಮಾಡಿದ ಘಟನೆ ವಿಟ್ಲ ಸಮೀಪದ ಗಾಳಿಹಿತ್ಲು ಎಂಬಲ್ಲಿ ನಡೆದಿದೆ. 

ವಿಟ್ಲ ಸಮೀಪದ ಗಾಳಿಹಿತ್ಲು ಎಂಬ ಪ್ರದೇಶದಲ್ಲಿ ಹಳೆಯದಾದ ಕ್ವಾರ್ಟರ್‍ಸ್‌ ಕಟ್ಟಡಗಳಿದ್ದು,ಈಗ ಕಟ್ಟಡಗಳೆಲ್ಲ ದುರಸ್ತಿ ಇಲ್ಲದೆ ನೆಲಸಮವಾಗಿದೆ.

ಇತ್ತೀಚೆಗೆ ತಾಲೂಕು ಪಂಚಾಯತ್‌ನವರು ಆ ಸ್ಥಳಕ್ಕೆ ಗೇಟ್‌ ಅಳವಡಿಸಿ ಸರಕಾರಿ ಬೀಗಮುದ್ರೆ ಹಾಕಿದ್ದು, ಇದೀಗ ಕೆಲ ಸಮಯದಿಂದ ಕೆಲವು ಯುವಕರು ಅಕ್ರಮ ಪ್ರವೇಶ ಮಾಡಿ ಫುಟ್ಬಾಲ್ ಆಟವಾಡುವ ನೆಪದಲ್ಲಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಹುಡುಗಿಯರನ್ನು ಚುಡಾಯಿಸುವುದು, ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸುದ್ದಿ ಹರಿದಾಡುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಲುವಂತೆ ವಿಟ್ಲ ಪಟ್ಟಣ ಪಂಚಾಯತ್‌ ಮುಖ್ಯಧಿಕಾರಿಯವರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.

- Advertisement -

Related news

error: Content is protected !!