Sunday, June 21, 2026
spot_imgspot_img
spot_imgspot_img

ಕಡಬ : ದಾರಿಯಲ್ಲಿ ಹೋಗುವ ವಿಚಾರವಾಗಿ ಅಣ್ಣ-ತಮ್ಮನಿಗೆ ಜಗಳ

- Advertisement -
- Advertisement -

ಕಡಬ : ಜಾಗದ ತಕರಾರು ಇದ್ದು, ದಾರಿಯಲ್ಲಿ ಹೋಗುವ ವಿಚಾರದಲ್ಲಿ ಅಣ್ಣ-ತಮ್ಮನಿಗೆ ಜಗಳ ನಡೆದ ಘಟನೆ ಕಡಬದ ಬಳ್ಪ ಗ್ರಾಮದ ಕಟ್ಟ ಮನೆ ಎಂಬಲ್ಲಿ ನಡೆದಿದೆ.

ಬಳ್ಪ ಗ್ರಾಮ, ಕಡಬ ನಿವಾಸಿ ವೀರಪ್ಪ ಗೌಡ (65) ಎಂಬವರ ದೂರಿನಂತೆ, ಕಡಬ ತಾಲೂಕು, ಬಳ್ಪ ಗ್ರಾಮದ ಕಟ್ಟ ಮನೆ ಎಂಬಲ್ಲಿ ತನ್ನ ಸಂಸಾರದೊಂದಿಗೆ ವಾಸವಾಗಿದ್ದು, ಕೃಷಿ ಕೆಲಸ ಮಾಡಿಕೊಂಡಿದ್ದಾರೆ. ವೀರಪ್ಪ ಗೌಡ ಮತ್ತು ಅವರ ತಮ್ಮ ಪದ್ಮನಾಭ ಗೌಡ ಎಂಬವರಿಗೆ ಜಾಗದ ತಕರಾರು ಇದ್ದು, ದಿನಾಂಕ: 25-03-2024 ರಂದು ಸಂಜೆ, ವೀರಪ್ಪ ಗೌಡರು ಅಂಗಡಿಗೆ ಹೋಗಿ ಬರುವಾಗ, ಪದ್ಮನಾಭರ ಮನೆಗೆ ಹೋಗುವ ಗೇಟಿನ ಹತ್ತಿರ ಪದ್ಮನಾಭ ಗೌಡ ಮತ್ತು ಅವರ ಪತ್ನಿ ಪದ್ಮಾವತಿ ರವರು ಇವರನ್ನು ತಡೆದು ನಿಲ್ಲಿಸಿ ದಾರಿಯಲ್ಲಿ ಹೋಗುವ ವಿಚಾರದಲ್ಲಿ ತಕರಾರು ತೆಗೆದು ಹಲ್ಲೆ ನಡೆಸಿದ್ದಾರೆ. ಘಟನೆ ಬಗ್ಗೆ ವೀರಪ್ಪ ಗೌಡ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ :20 /2024 ಕಲಂ: 341,323 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!