Sunday, June 29, 2025
spot_imgspot_img
spot_imgspot_img

ಕುಡ್ತಮುಗೇರು: ಹೃದಯಾಘಾತದಿಂದ ಆಟೋ ಚಾಲಕ ಸಾವು..!

- Advertisement -
- Advertisement -

ಕುಡ್ತಮುಗೇರು: ಹಿರಿಯ ಆಟೋ ಚಾಲಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ನಡೆದಿದೆ.

ಹಿರಿಯ ಆಟೋ ಚಾಲಕ ಅರಂಗಳ ಯೂಸುಫ್ (68) ಎಂದು ಗುರುತಿಸಲಾಗಿದೆ.

ಮೂಲತಃ ಅನಂತಾಡಿ ಗ್ರಾಮದ ನಿವಾಸಿಯಾಗಿದ್ದು ಪ್ರಸ್ತುತ ಕೊಳ್ನಾಡು ಗ್ರಾಮದ ಕುಡ್ತಮುಗೇರು ನಿವಾಸಿಯಾಗಿರುವ ಹಿರಿಯ ಆಟೋ ಚಾಲಕ ಯೂಸುಫ್ ಬುಧವಾರ ರಾತ್ರಿ ತನ್ನ ಮನೆಯಲ್ಲಿ ಅಸ್ವಸ್ಥರಾಗಿ ಕುಸಿದುಬಿದ್ದ ಅವರನ್ನು ತಕ್ಷಣವೇ ದೇರಳಕಟ್ಟೆ ಯೆನಪೊಯ ಆಸ್ಪತ್ರೆಗೆ ಕರೆದೊಯ್ದರೂ ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೊಳ್ನಾಡು ಗ್ರಾಮದ ಕುಡ್ತಮುಗೇರು ಆಟೋ ಚಾಲಕ-ಮಾಲಕ ಸಂಘದ ಮಾಜಿ ಪದಾಧಿಕಾರಿಯಾಗಿದ್ಜ ಯೂಸುಫ್ ನಿಧನ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಒಂದು ಗಂಟೆ ಕಾಲ ಆಟೋ ಚಾಲಕರು ಸ್ಥಗಿತಗೊಳಿಸಿ ಸಂತಾಪ ವ್ಯಕ್ತಪಡಿಸಲಿದ್ದಾರೆ.

- Advertisement -

Related news

error: Content is protected !!