Monday, June 22, 2026
spot_imgspot_img
spot_imgspot_img

ಒಕ್ಕೆತ್ತೂರು: ಕುಟುಂಬದ ನೂತನ ದೈವ ದೇವರ ಬಂಜನ್‌ ತರವಾಡು ಮನೆಯ ಗೃಹಪ್ರವೇಶ, ದೈವಗಳ ಪುನರ್‌ ಪ್ರತಿಷ್ಠಾ ಮತ್ತು ಕಲಶಾಭಿಷೇಕ ಹಾಗೂ ಕೋಲೋತ್ಸವ

- Advertisement -
- Advertisement -

ಒಕ್ಕೆತ್ತೂರು ಕುಟುಂಬದ ನೂತನ ದೈವ ದೇವರ ಬಂಜನ್‌ ತರವಾಡು ಮನೆಯ ಗೃಹಪ್ರವೇಶ ಮತ್ತು ಕಲ್ಲುರ್ಟಿ, ಪಂಜುರ್ಲಿ ರಾಹುಗುಳಿಗ ದೈವಗಳ ಪುನರ್‌ ಪ್ರತಿಷ್ಠಾ ಮತ್ತು ಕಲಶಾಭಿಷೇಕ ಕೊಲೋತ್ಸವವು ವೇದಮೂರ್ತಿ ಕಾರಿಂಜ ರಾಘವೇಂದ್ರ ಭಟ್ ತಂತ್ರಿವರ್ಯರ ನೇತೃತ್ವದಲ್ಲಿ ಹಾಗೂ ಕಂಬಳಬೆಟ್ಟು ವಾಸ್ತುಶಿಲ್ಪಿ ಮಹಾಬಲ ಆಚಾರಿ ಇವರ ಗೌರವ ಉಪಸ್ಥಿತಿಯಲ್ಲಿ ಒಕ್ಕೆತ್ತೂರು ಕುಟುಂಬದ ನೂತನ ದೈವದೇವರ ಸಾನಿಧ್ಯ ಇಂದ್ರಪಡ್ಪು ಮಾಮೇಶ್ವರ ಕಟ್ಟೆ ಇಲ್ಲಿ ನಡೆಯಿತು.

ಬೆಳಗ್ಗೆ ಗಣಪತಿ ಹೋಮ, ಬಳಿಕ ತರವಾಡು ಮನೆಯ ಗೃಹಪ್ರವೇಶ ನಡೆಯಿತು. ಬಳಿಕ ಕುಪ್ಪೆ ಪಂಜುರ್ಲಿ ಮತ್ತು ಕಲ್ಲುರ್ಟಿ ದೈವಗಳ ಮನೆ ಮಂಚ ಆಯುಧಗಳ ಪ್ರತಿಷ್ಠೆ, ಕಲಶಾಭಿಷೇಕ, ಕಟ್ಟೆಯಲ್ಲಿ ರಾಹುಗುಳಿಗ ಪ್ರತಿಷ್ಠೆ, ಮುಡಿಪು ಪೂಜೆ ಕಾಣಿಕೆ ನಡೆಯಿತು. ನಂತರ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ನಡೆಯಿತು. ಬಳಿಕ ಕುಟುಂಸ್ಥರು ಮತ್ತು ಸ್ಥಳೀಯರಿಂದ ಭಜನಾ ಸೇವೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ರಾಹು ಗುಳಿಗ ದೈವಗಳ ಕೋಲ ನಡೆಯಲಿದೆ. ನಾಳೆ ಮಾ. (29) ನೇ ಶುಕ್ರವಾರ ದೈವಗಳಿಗೆ ತಂಬಿಲ ಸೇವೆ, ಗುರು ಹಿರಿಯರಿಗೆ ಬಡಿಸುವುದು ಕಾರ್ಯಕ್ರಮ ನಡೆಯಲಿದೆ.

- Advertisement -

Related news

error: Content is protected !!