Monday, June 22, 2026
spot_imgspot_img
spot_imgspot_img

ಬಂಟ್ವಾಳ: ಮನೆಗೆ ನುಗ್ಗಿ ವ್ಯಕ್ತಿಗೆ ಚೂರಿ ಇರಿತ; ಆಸ್ಪತ್ರೆಗೆ ದಾಖಲು..!

- Advertisement -
- Advertisement -

ಬಂಟ್ವಾಳ: ಮನೆಗೆ ನುಗ್ಗಿ ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಪುದು ಗ್ರಾಮ, ಬಂಟ್ವಾಳದಲ್ಲಿ ನಡೆದಿದೆ.

ಆರೋಪಿಯನ್ನು ಅಬ್ದುಲ್ ರಹಿಮಾನ್ ಯಾನೆ ಮುನ್ನಿ ಎಂದು ಗುರುತಿಸಲಾಗಿದೆ.

ಪುದು ಗ್ರಾಮ, ಬಂಟ್ವಾಳ ನಿವಾಸಿ ಮಹಮ್ಮದ್ ರಮೀಜ್ (29) ಎಂಬವರ ದೂರಿನಂತೆ, ಸದ್ರಿಯವರು ಮನೆಯಲ್ಲಿ ಅಣ್ಣ ಮಹಮ್ಮದ್ ಬಿಲಾಲ್ , ತಮ್ಮ ಮಹಮ್ಮದ್ ಮಿಗ್ದಾದ್ ಹಾಗೂ ಅಕ್ಕನೊಂದಿಗೆ ವಾಸವಾಗಿರುತ್ತಾರೆ. ಸಂಜೆ ಮನೆಯಲ್ಲಿ ಭಾನುವಾರ ಸಂಜೆ ಬಿಲಾಲ್ ಹಾಗೂ ರಮೀಝ್ ಇಬ್ಬರೇ ಇದ್ದು, ರಮೀಝ್ ಮನೆಯ ಮಹಡಿಯ ಕೋಣೆಯಲ್ಲಿದ್ದ ವೇಳೆ ಕೆಳಗೆ ಬೊಬ್ಬೆ ಕೇಳಿ ಕೆಳಗೆ ಬಂದು ನೋಡಿದಾಗ ಆರೋಪಿ ತನ್ನ ಕೈಯಲ್ಲಿದ್ದ ಚೂರಿಯಿಂದ ಹೊಟ್ಟೆಗೆ 2 ಬಾರಿ ಇರಿದಿರುವುದಲ್ಲದೆ, ಕೈ ಗೆ ತಿವಿದು ಗಾಯಗೊಳಿಸಿದ್ದಾನೆ. ಸ್ಥಳಕ್ಕೆ ರಮೀಝ್ ಬರುವುದನ್ನು ನೋಡಿ ಅರೋಪಿ ಓಡಿ ಹೋಗಿರುತ್ತಾನೆ. ಗಾಯಾಳುವನ್ನು ಮಂಗಳೂರು ಜ್ಯೋತಿ ಬಳಿಯ ಕೆ ಎಮ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 47/2024, ಕಲಂ : 448,326,307 ಐ ಪಿ ಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!