Sunday, June 21, 2026
spot_imgspot_img
spot_imgspot_img

ಬಂಟ್ವಾಳ : ಯುವಕನಿಗೆ ಚೂರಿ ಇರಿತ ಆರೋಪಿ ಪರಾರಿ

- Advertisement -
- Advertisement -

ಬಂಟ್ವಾಳ : ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ ಬಂಟ್ವಾಳದ ಬಡ್ಡಕಟ್ಟೆ ಎಂಬಲ್ಲಿ ಘಟನೆ ನಡೆದಿದೆ.

ಪುಷ್ಪರಾಜ್ ಎಂಬವರಿಗೆ ಚೂರಿ ಇರಿತವಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ .

ರವಿ ನಾವೂರು ಹಾಗೂ ಪುಷ್ಪರಾಜ್ ಎಂಬವರ ನಡುವೆ ಗಲಾಟೆ ನಡೆದು, ಆರೋಪಿ ರವಿ ನಾವೂರು ಎಂಬಾತನು ಪುಷ್ಪರಾಜ್ ರವರಿಗೆ ಚೂರಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಹಲ್ಲೆಯ ಬಗ್ಗೆ ಗಾಯಾಳು ಪುಷ್ಪರಾಜ್ ಅವರಲ್ಲಿ ವಿಚಾರಿಸಿದಾಗ, ಹಣಕಾಸಿನ ವಿಚಾರದಲ್ಲಿ ಆರೋಪಿ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.
ಬಂಟ್ವಾಳ ನಗರ ಠಾಣಾ ಪೋಲೀಸರು ಸ್ಥಳಕ್ಕೆ ಬೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!