- Advertisement -
- Advertisement -



ವಿಟ್ಲ ಸರಕಾರಿ ಪ್ರೌಢಶಾಲೆ RMSA ಪ್ರಾಥಮಿಕ ವಿಭಾಗ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಇದರ ಸಹಯೋಗದೊಂದಿಗೆ ನಡೆದ 5 ದಿನಗಳ ಶಿಕ್ಷಕರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಶತಮಾನೋತ್ತರ ಸಭಾ ಭವನದಲ್ಲಿ ನಡೆಯಿತು.
ಶಾಲಾ ಗೌರವಾಧ್ಯಕ್ಷ ಸುಬ್ರಾಯ ಪೈ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿಶಂಕರ ಶಾಸ್ತ್ರಿ, ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಕೆ, ಅಧ್ಯಾಪಕ ಸದಾಶಿವ ನಾಯಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಸುಚಿತ್ರಾ ಶೆಟ್ಟಿ ಮತ್ತು ಸವಿತಾ ಗುಜರನ್, ಎಸ್ ಡಿ ಎಂ ಸಿ ಸದಸ್ಯರಾದ ರಾಜಶೇಖರ ಶೆಟ್ಟಿ, ವಾಸುದೇವ ಪ್ರಭು, ಸಹಶಿಕ್ಷಕರು ಹಾಗೂ ಗೌರವ ಶಿಕ್ಷಕರು ಉಪಸ್ಥಿತರಿದ್ದರು.
ಸುಪ್ರಿತಾ ಸ್ವಾಗತಿಸಿದರು. ಮೋಹಿನಿ ವಂದಿಸಿದರು. ಶೋಭಾ ಕುಂದರ್ ನಿರೂಪಿಸಿದರು. ಗಾಯತ್ರಿ ಸಹಕರಿಸಿದರು.
- Advertisement -








