- Advertisement -
- Advertisement -

ವಿಟ್ಲ: ಹಿಂದೂ ಜಾಗರಣ ವೇದಿಕೆ ಪುಣಚ ವಲಯದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮ ವಿಟ್ಲ ಭಗವತೀ ದೇವಸ್ಥಾನದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಹಿಂಜಾವೇ ಪ್ರಾಂತ ಪ್ರಮುಖರಾದ ರಾಧಕೃಷ್ಣ ಅಡ್ಯಂತಾಯ ಅವರು ಮಾಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂಜಾವೇ ಪುಣಚ ವಲಯ ಅಧ್ಯಕ್ಷರಾದ ಸುದರ್ಶನ ಆಳ್ವ ವಹಿಸಿದ್ದರು, ಕಾರ್ಯಕ್ರಮದ ವೇದಿಕೆಯಲ್ಲಿ ಹಿಂಜಾವೇ ವಿಟ್ಲ ತಾಲೂಕು ಅಧ್ಯಕ್ಷರಾದ ಗಣೇಶ್ ಕುಮಾರ್ ಕೆದಿಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿಂಜಾವೇ ಉಪಾಧ್ಯಕ್ಷರಾದ ರಾಜೇಶ್ ಕರೋಪಾಡಿ ರವರು & ತಾಲೂಕು ಕಾರ್ಯದರ್ಶಿ ಹರ್ಷ ರವರು, ಪುಣಚ ವಲಯದ ಪ್ರಮುಖರು & ಘಟಕದ ಕಾರ್ಯಕರ್ತರು ಭಾಗವಹಿಸಿದ್ದರು.
ಹಿಂಜಾವೇ ಪುಣಚ ವಲಯ ಪ್ರಧಾನ ಕಾರ್ಯದರ್ಶಿ ಯಶಸ್ ಹೆಗ್ಡೆ ಸ್ವಾಗತಿಸಿ, ಧನ್ಯವಾದವನ್ನು ನೆರವೇರಿಸಿದರು, ದೀಕ್ಷಿತ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.




- Advertisement -








