Monday, June 30, 2025
spot_imgspot_img
spot_imgspot_img

ಬ್ರಹ್ಮಾವರ: ಮನೆಯಿಂದ ಹೊರ ಹೋದ ಮಹಿಳೆ ವಾಪಸು ಬಾರದೆ ನಾಪತ್ತೆ; ಪತ್ತೆಗಾಗಿ ಮನವಿ..!

- Advertisement -
- Advertisement -

ಬ್ರಹ್ಮಾವರ: ಮಹಿಳೆಯೋರ್ವರು ನಾಪತ್ತೆಯಾದ ಘಟನೆ ಬ್ರಹ್ಮಾವರ ಹಲುವಳ್ಳಿ ಕೊಂಟಿಬೈಲು ಎಂಬಲ್ಲಿ ನಡೆದಿದೆ.

ನಾಪತ್ತೆಯಾದ ಮಹಿಳೆ ಹಲುವಳ್ಳಿ ಕೊಂಟಿಬೈಲಿನ ಸುಜಾತಾ ಶೆಟ್ಟಿ (39) ಎಂದು ಗುರುತಿಸಲಾಗಿದೆ.

ಸುಮಾರು 16 ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಅವರು ಈ ಹಿಂದೆ ಹಲವು ಬಾರಿ ಮನೆ ಬಿಟ್ಟು ಹೋಗಿ ಸಂಬಂಧಿಕರ ಮನೆಯಲ್ಲಿ ಉಳಿದು 2, 3 ದಿನಗಳ ಅನಂತರ ಮರಳುತ್ತಿದ್ದರು.ಮೇ 24ರ ಸಂಜೆ ಮನೆಯಿಂದ ಹೋದವರು ಇದುವರೆಗೆ ವಾಪಸಾಗಿಲ್ಲ.

ಕಂದು ಬಿಳಿ ಬಣ್ಣದ ಚೂಡಿದಾರ್‌, ಕಂದು ಬಣ್ಣದ ಪ್ಯಾಂಟ್‌ ಧರಿಸಿದ್ದು, ಕಾಲಿನಲ್ಲಿ ಕತ್ತಿಯ ಗಾಯದ ಗುರುತು ಇದೆ. ಇವರ ಕುರಿತು ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಠಾಣೆ (0820-2561044) ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

- Advertisement -

Related news

error: Content is protected !!