- Advertisement -
- Advertisement -
ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಬಳಕೆದಾರರನ್ನು ಪಬ್-ಜಿ ಯಷ್ಟು ಬಹುವಾಗಿ ಸೆಳೆದ ಗೇಮಿಂಗ್ ಬೇರೊಂದಿಲ್ಲ ಎಂದು ನಿಸ್ಸಂದೇಹವಾಗಿ ಹೇಳಬಹುದು.

ಹಳ್ಳಿಯಿಂದ ಹಿಡಿದು ಪಟ್ಟಣಗಳ ವರೆಗೆ ಮಕ್ಕಳಿಂದ ಹಿಡಿದು ಮಧ್ಯ ವಯಸ್ಕರವರೆಗೆ ಹೀಗೆ ಎಲ್ಲಾ ವರ್ಗದ ಸ್ಮಾರ್ಟ್ ಫೋನ್ ಬಳಕೆದಾರರನ್ನು ಆವರಿಸಿದ್ದ ಪಬ್-ಜಿ ಚೀನಾ ಪುಂಡಾಟದ ದೆಸೆಯಿಂದ ಭಾರತದಲ್ಲಿ ಬ್ಯಾನ್ ಆಗಿತ್ತು.

ಈಗ ಕುತೂಹಲಕಾರಿ ನಿಲುವು ತಾಳಿರುವ ಪಬ್-ಜಿ ಕಾರ್ಪೋರೇಶನ್ ತನ್ನ ಸಂಸ್ಥೆಯ ಪರವಾಗಿ ಭಾರತದಲ್ಲಿ ಕಾರ್ಯ ನಿರ್ವಹಿಸಲು ಕಾರ್ಪೋರೇಟ್ ಡೆವಲಪ್ಮೆಂಟ್ ಡಿವಿಷನ್ ಮ್ಯಾನೆಜರ್ ಹುದ್ದೆಗಾಗಿ ಲಿಂಕ್ಡೆನ್ ವೆಬ್ಸೈಟ್ನಲ್ಲಿ ಅರ್ಜಿ ಆಹ್ವಾನಿಸಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಮತ್ತೆ ಭಾರತದಲ್ಲಿ ಕಾರ್ಯಚರಿಸಲು ಪಬ್-ಜಿ ಸಿದ್ಧತೆ ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಪಬ್-ಜಿಯ ಭಾರತದ ಡಿವಿಷನ್ ಮ್ಯಾನೇಜರ್ ಹುದ್ದೆಗೆ ಈವರೆಗೆ 200 ಭಾರತೀಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.


- Advertisement -








