- Advertisement -
- Advertisement -



ಕಾಸರಗೋಡು: ಮಹಿಳೆಯೋರ್ವರು ಹಾವು ಕಡಿದು ಮೃತಪಟ್ಟ ಘಟನೆ ಪೈವಳಿಕೆ ಸಮೀಪದ ಕುರುಡಪದವು ಎಂಬಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆ ಪೈವಳಿಕೆ ಕುರುಡಪದವಿನ ಚೋಮು ( 64) ಎಂದು ಗುರುತಿಸಲಾಗಿದೆ.
ಮಲಗಿದ್ದ ಚೋಮುರವರ ಕೈಗೆ ಯಾವುದೋ ಜೀವಿ ಕಡಿದ ಬಗ್ಗೆ ಅನುಭವವಾಗಿದ್ದು, ಎಚ್ಚರಗೊಂಡು ಸಹೋದರನಿಗೆ ತಿಳಿಸಿದ್ದಾರೆ. ಮನೆಯೊಳಗೆ ಶೋಧ ನಡೆಸಿದಾಗ ನಾಗರ ಹಾವು ಪತ್ತೆಯಾಗಿದೆ. ಕೂಡಲೇ ನೆರೆಮನೆಯರ ಸಹಾಯ ದಿಂದ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ.
- Advertisement -