Tuesday, July 8, 2025
spot_imgspot_img
spot_imgspot_img

ಕೈಕಾರ: ( ಸೆ. 01) ಸರ್ವಶಕ್ತಿ ಯುವಕ ಮಂಡಲ (ರಿ.), ಕೈಕಾರ ಒಳಮೊಗ್ರು ಗ್ರಾಮ, ಕೈಕಾರ ಇದರ ಆಶ್ರಯದಲ್ಲಿ 33ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ

- Advertisement -
- Advertisement -

ಕೈಕಾರ: ಸರ್ವಶಕ್ತಿ ಯುವಕ ಮಂಡಲ (ರಿ.), ಕೈಕಾರ ಒಳಮೊಗ್ರು ಗ್ರಾಮ, ಕೈಕಾರ ಇದರ ಆಶ್ರಯದಲ್ಲಿ 33ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಸೆ. 01ನೇ ಆದಿತ್ಯವಾರ ಕೈಕಾರ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬೆಳಗ್ಗೆ 10:00ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಬಿ.ಎಸ್‌‌.ರವಿಚಂದ್ರ ಶೆಟ್ಟಿ,ಮೂಲೆ ಮಾಜಿ ಸೈನಿಕರು, ಅಡ್ಡಕಂಬ ಉದ್ಘಾಟನೆ ಮಾಡಲಿದ್ದಾರೆ. ವಿಠಲ ಆಳ್ವ ಕೈಕಾರ ಪ್ರಗತಿಪರ ಕೃಷಿಕರು, ಚಂದ್ರಹಾಸ ರೈ, ಪನಡ್ಕ ಪ್ರಗತಿಪರ ಕೃಷಿಕರು, ಚೋಮು ನಾಯ್ಕ ಬಿಜತ್ರೆ ಪ್ರಗತಿಪರ ಕೃಷಿಕರು, ಸಂಜೀವ ನಾಯ್ಕ, ಬಿಜತ್ರೆ ಪ್ರಗತಿಪರ ಕೃಷಿಕರು ಗೌರವ ಉಪಸ್ಥಿತರಿರುವರು.

ಬೆಳಿಗ್ಗೆ 10:30ರಿಂದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳು ನಡೆಯಲಿದೆ.

ಸಂಜೆ 5:30ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಸೀತರಾಮ ರೈ ಸಿ. ಚೆಲ್ಯಡ್ಕ, ಕೈಕಾರ ಇಂಜಿನಿಯರ್‌, ಎಂ.ಆರ್‌.ಪಿ.ಎಲ್‌‌, ಮಂಗಳೂರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಶಾಸಕರು ಪುತ್ತೂರು, ರಾಮ್‌ದಾಸ್‌ ಶೆಟ್ಟಿ ಕಂಬಳಬೆಟ್ಟು ಅಧ್ಯಕ್ಷರು ಕರ್ನಾಟಕ ಜರ್ನಲಿಸ್ಟ್‌‌ ಯೂನಿಯನ್‌ (ರಿ.) ಪುತ್ತೂರು, ಸಂತೋಷ್‌ ಕುಮಾರ್‌ ರೈ ತೊಟ್ಲ ಯುವ ಉದ್ಯಮಿ, ದಿನೇಶ್‌‌‌‌ ರೈ ಮೊಡಪ್ಪಾಡಿಮೂಲೆ ಯುವ ಉದ್ಯಮಿ, ಸಂತೋಷ್‌ ಕುಮಾರ್‌ ರೈ ಕೈಕಾರ ಯುವ ಉದ್ಯಮಿ, ಕೀರ್ತನ್‌‌ ರೈ ತೊಟ್ಲ ಯುವ ಉದ್ಯಮಿ, ಸುರೇಂದ್ರ ರೈ ಅಣಿಲೆ ಪ್ರಗತಿಪರ ಕೃಷಿಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!