Friday, July 4, 2025
spot_imgspot_img
spot_imgspot_img

ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) 2023-2024ನೇ ಸಾಲಿನ ವಾರ್ಷಿಕ ಮಹಾಸಭೆ

- Advertisement -
- Advertisement -

ಸಂಘವು ರೂ. 204.92 ಕೋಟಿ ವ್ಯವಹಾರ, 1,07,00,765.55/- ಲಾಭ; ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ಘೋಷಣೆ

ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) 2023-2024ನೇ ಸಾಲಿನ ವಾರ್ಷಿಕ ಮಹಾಸಭೆಯು ವಿಠಲ ಪದವಿ ಪೂರ್ವ ಕಾಲೇಜಿನ ’ಸುವರ್ಣ ರಂಗಮಂದಿರದಲ್ಲಿ’ ನಡೆಯಿತು.

ಲಿಂಗಪ್ಪ ಮೂಲ್ಯ ಕಬ್ಬಿನಹಿತ್ಲು, ಜಗನ್ನಾಥ ಸಾಲ್ಯಾನ್ ಅಧ್ಯಕ್ಷರು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿ., ಜಯಪ್ರಕಾಶ್ ನಾಯಕ್, ಮೋಹನ್‌ದಾಸ್ ಉಕ್ಕುಡ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡೀದರು.

ಸಂಘದ ಅಧ್ಯಕ್ಷರು ನರ್ಸಪ್ಪ ಪೂಜಾರಿ ಯನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರು ಮಹಾಬಲೇಶ್ವರ ಭಟ್ ಎ, ನಿರ್ದೇಶಕರುಗಳಾದ ದಯಾನಂದ ಶೆಟ್ಟಿ ಉಜಿರೆಮಾರ್, ಸದಾನಂದ ಗೌಡ ಸೇರಾಜೆ, ಉದಯ್ ಕುಮಾರ್ ಎನ್, ರಾಘವೇಂದ್ರ ಪೈ ಎ, ದಿನೇಶ್ ಕೆ, ವಾಸು ಸಿ ಹೆಚ್, ಶಿವಪ್ಪ ನಾಯ್ಕ, ಗೌರಿ ಎಸ್ ಎನ್ ಭಟ್, ಸಂಗೀತಾ ಯನ್, ಕವಿತಾ ಕೆ ಎಲ್, ಉಪಸ್ಥಿತರಿದ್ದರು.

ಸಭೆಯಲ್ಲಿ 2023-2024 ನೇ ವಾರ್ಷಿಕ ವರದಿ, ಕಳೆದ ವರ್ಷದ ಮಹಾಸಭೆಯ ನಡವಳಿಕೆ, ವಾರ್ಷಿಕ ಸಾಲಿನ ಜಮಾ-ಖರ್ಚು ವ್ಯಾಪಾರ ಲಾಭ-ನಷ್ಟ ಮತ್ತು ಆಸ್ತಿ ಜವಾಬ್ದಾರಿ ತಖ್ತೆಗಳ ಮಂಜೂರಾತಿ, ವಾರ್ಷಿಕ ಸಾಲಿನ ಲೆಕ್ಕ ಪರಿಶೋಧನಾ ವರದಿಯ ಮಂಜೂರಾತಿ, ವಾರ್ಷಿಕ ಸಾಲಿನ ಅಂದಾಜು ಬಜೆಟ್ ಗಿಂತ ಮಿಕ್ಕಿ ಆದ ಖರ್ಚಿನ ಮಂಜೂರಾತಿ, 2023-2024ನೇ ವರ್ಷದ ಬಾಬ್ತು ತಯಾರಿಸಲಾದ ಅಂದಾಜು ಆಯ- ವ್ಯಯ ಪಟ್ಟಿ ಮಂಜೂರಾತಿ, ವಾರ್ಷಿಕ ಸಾಲಿನ ವರ್ಷದ ಲಾಭಾಂಶ ವಿಂಗಡನೆ, 2023-2024ನೇ ಸಂಯೋಜಿತ ಸಂಸ್ಥೆಗಳಿಗೆ ಪ್ರತಿನಿಧಿಗಳ ಆಯ್ಕೆ, 2023-2024ನೇ ಸಾಲಿನ ಲೆಕ್ಕ ಪರಿಶೋಧಕರ ಆಯ್ಕೆ ಪ್ರಕೃಯೆಗಳ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭುವನೇಶ್ವರ ಬಿ. ಪ್ರಸ್ತುತ ಸಾಲಿನ ವರದಿ ಮತ್ತು ಲೆಕ್ಕ ಪತ್ರಗಳನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಶೇಕಡಾ 80 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಒಟ್ಟು 44 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ಎನ್ ಮಾತನಾಡಿ ‘ಸಂಘವು ವರದಿ ವರ್ಷದಲ್ಲಿ ಶೇಕಡಾ 9.40 ಠೇವಣಿ ಅಭಿವೃದ್ಧಿಯಾಗಿರುತ್ತದೆ. ಠೇವಣಾತಿಗಳಿಗೆ ಅತ್ಯಾಕರ್ಷಕ ಬಡ್ಡಿಯನ್ನು ನೀಡುತ್ತಿದ್ದು, ಹಿರಿಯ ನಾಗರಿಕರಿಗೆ ( 60 ವರ್ಷ ಮೇಲ್ಪಟ್ಟು ) ಶೇಕಡಾ 1/2 ರಷ್ಟು ಅಧಿಕ ಬಡ್ಡಿಯನ್ನು ನೀಡಲಾಗುತ್ತಿದೆ. ಪ್ರಸ್ತುತ 2023-24ನೇ ಸಾಲಿನಲ್ಲಿ ಸಂಘವು ರೂ. 204.92 ಕೋಟಿ ವ್ಯವಹಾರ ಮಾಡಿ ಎಲ್ಲಾ ಖರ್ಚುಗಳನ್ನು ಕಳೆದು ರೂ. 1,07,00,765.55/- ಲಾಭ ಗಳಿಸಿದ್ದು ವರದಿ ಸಾಲಿನಲ್ಲಿ ಸಂಘವನ್ನು “ಎ” ತರಗತಿಯಲ್ಲಿ ವರ್ಗೀಕರಿಸಲಾಗಿದೆ ಎಂದು ಘೋಷಣೆ ಮಾಡಿದರು.

ಸಂಘದ ನಿರ್ದೇಶಕ ರಾಘವೇಂದ್ರ ಪೈ ಸ್ವಾಗತಿಸಿ, ಅರ್ಚನಾ ಡಿ.ಕೆ ಪ್ರಾರ್ಥಿಸಿದರು. ಉಪಾಧ್ಯಕ್ಷ ಮಹಾಬಲೇಶ್ವರ ಭಟ್ ಎ ಧನ್ಯವಾದವಿತ್ತರು. ಶ್ರೀಮತಿ ಶೋಭಾ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!