ವಿಟ್ಲ: ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ (ನಿ.) ಪುತ್ತೂರು ವಿಟ್ಲ ಶಾಲೆಯ ಸ್ವಂತ ಕಟ್ಟಡ ಕೋಣೆಯ ಉದ್ಘಾಟನೆ ಹಾಗೂ ಸ್ಥಳಾಂತರ ಸಮಾರಂಭ ಕಾರ್ಯಕ್ರಮವು ಸೆ.13 ನೇ ಶುಕ್ರವಾರ 10:30ಕ್ಕೆ ಸ್ಮಾರ್ಟ್ ಸಿಟಿ, ಮುಖ್ಯರಸ್ತೆ, ವಿಟ್ಲ ಇಲ್ಲಿ ನಡೆಯಲಿದೆ.
ಚಂದಪ್ಪ ಮೂಲ್ಯ ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಬಿ. ಎಸ್.ಎಫ್ ಮಾಲಕರು, ಅಮೂಲ್ಯ ಗ್ಯಾಸ್ ಏಜೆನ್ಸಿ ಉಪ್ಪಿನಂಗಡಿ ಇವರು ಶಾಖೆಯ ಕಟ್ಟಡ ಕೋಣೆ ಉದ್ಘಾಟಿಸಲಿದ್ದಾರೆ. ನಾಗರಾಜ್ ಯಚ್.ಇ ವಿಟ್ಲ ಪೊಲೀಸ್ ಠಾಣೆ ಪೊಲೀಸ್‌ನಿರೀಕ್ಷರು ಭದ್ರತಾ ಕೋಣೆ ಉದ್ಘಾಟಿಸಲಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ನೀಡಲಿದ್ದಾರೆ. ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಮಯೂರ್ ಉಳ್ಳಾಲ್ ಗಣಕ ಯಂತ್ರ ಉದ್ಘಾಟಿಸಲಿದ್ದಾರೆ. ವಕೀಲರು, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ನಿ. ಪುತ್ತೂರು ಇದರ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ನಳೀಲು ಇದರ ಆಡಳಿತ ಮೊತ್ತೇಸರರು ಸಂತೋಷ್ ಕುಮಾರ್ ರೈ ನಳೀಲು, ಉದ್ಯಮಿಗಳು ಪುತ್ತೂರು ಕೃಷ್ಣಕಿಶೋರ್ ಎನ್.ಟಿ., ಶ್ರೀ ಚಂದ್ರನಾಥ ದೇವರ ಬಸದಿ ವಿಟ್ಲ ಇದರ ಆಡಳಿತ ಮೊಕ್ತಸರರು ವಿನಯ ಕುಮಾರ್, ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಯು. ಮೂಲ್ಯ, ವಿಟ್ಲ ಕುಲಾಲ ಸಂಘದ ಅಧ್ಯಕ್ಷ ಬಾಬು ಬಿ. ಕೆ., ನ್ಯಾಯವಾದಿಗಳು, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ವಿಟ್ಲ ಎಂಪಾಯರ್ ಮಾಲ್ ಮಾಲಕ ಪೀಟರ್ ಎಫ್ ಲಸ್ರಾದೋ, ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ವಿಟ್ಲ ಭಾರತ್ ಅಡಿಟೋರಿಯಂ ಮ್ಹಾಲಕ ಸಂಜೀವ ಪೂಜಾರಿ, ಇಂಜಿನಿಯರ್ ವಿಟ್ಲ ರಾಮ ಮೂಲ್ಯ , ಅಳಿಕೆ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ವಸಂತ ಮೂಲ್ಯ ಎರುಂಬು, ವಿಟ್ಲ ಸ್ಮಾರ್ಟ್ ಸಿಟಿ ಮಹಮ್ಮದ್ ಹನೀಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.