Saturday, June 28, 2025
spot_imgspot_img
spot_imgspot_img

ಉಡುಪಿ: ಬೆಡ್ ಶೀಟ್ ಮಾರುವ ನೆಪದಲ್ಲಿ ಮನೆಗೆ ನುಗ್ಗಿದ ಅಪರಿಚಿತ : ಉಡುಪಿ ನಗರ ಠಾಣೆಗೆ ದೂರು ದಾಖಲು

- Advertisement -
- Advertisement -

ಉಡುಪಿ: ಬೆಡ್ ಶೀಟ್ ಮಾರುವ ನೆಪದಲ್ಲಿ ಅಪರಿಚಿತ ವ್ಯಕ್ತಿ ವೃದ್ಧೆಯೊಬ್ಬರ ಮನೆಗೆ ನುಗ್ಗಿರುವ ಘಟನೆ ಉಡುಪಿಯ ಅಂಬಲಪಾಡಿ ಸಮೀಪದ ನಡೆದಿದೆ.

ದುಬೈನಲ್ಲಿ ಪ್ರವೀಣ್ ಎಂಬವರು ಕೆಲಸ ಮಾಡಿಕೊಂಡಿದ್ದು, ಅವರ ತಾಯಿ ವಿನೋದಿನಿ (82ವರ್ಷ) ಉಡುಪಿಯ ಅಂಬಲಪಾಡಿಯ ಶ್ಯಾಮ್ ಸದನದಲ್ಲಿ ಒಬ್ಬರೇ ವಾಸವಾಗಿದ್ದರು ಎನ್ನಲಾಗಿದೆ.

ಯಾರೋ ಅಪರಿಚಿತ ವ್ಯಕ್ತಿ ಬೆಡ್ ಶೀಟ್ ಮಾರುವ ನೆಪದಲ್ಲಿ ವಿನೋದಿನಿ ಅವರ ರೂಂ ಪ್ರವೇಶಿಸಿ ಬೆಡ್ ಶೀಟ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದ. ಇದನ್ನು ಗಮನಿಸಿದ ಮನೆಯ ಕೇರ್ ಟೇಕರ್ ತುಳಜಾ ಎಂಬವರು ಪ್ಲಂಬಿಂಗ್ ಕೆಲಸಕ್ಕೆ ಬಂದಿದ್ದ ಪ್ರಶಾಂತ್ ಅವರನ್ನು ಕರೆದುಕೊಂಡು ಬರುವಷ್ಟರಲ್ಲಿ ಅಪರಿಚಿತ ವ್ಯಕ್ತಿ ಮನೆಯಿಂದ ಹೊರಬಂದು ಕಾರಿನಲ್ಲಿ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಪ್ರವೀಣ್ ಸ್ನೇಹಿತ ಕಿರಣ್ ಕುಮಾರ್ ಅವರು ಘಟನೆಯ ಬಗ್ಗೆ ಉಡುಪಿ ನಗರ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!