ಸಂಘವು ಪ್ರಸ್ತುತ ಸಾಲಿನಲ್ಲಿ ಬ್ಯಾಂಕ್ ರೂ 40,05,284.56 ಲಾಭ: 10% ಡೆವಿಡೆಂಡ್ ಘೋಷಣೆ





ವಿಟ್ಲ: ಬ್ರಹ್ಮಶ್ರೀ ವಿವಿದ್ದೋದ್ದೇಶ ಸಹಕಾರಿ ಸಂಘ ನಿ. ವಿಟ್ಲ ವಾರ್ಷಿಕ ಮಹಾಸಭೆಯು ಪೊನ್ನೊಟ್ಟು ಶಿವಗಿರಿ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಎನ್ ಹಾಗೂ ಹಿರಿಯ ಸದಸ್ಯರಾದ ಗಂಗಯ್ಯ ಎ ಮೆಲ್ಕಾರ್, ನೋಣಯ್ಯ ಪೂಜಾರಿ ಕಲ್ಲಕಟ್ಟ, ರಮೇಶ್ ಕಡಂಬು, ಜಗದೀಶ್ ಅಳಿಕೆಮಜಲು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಭೆಯಲ್ಲಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಎನ್ ಮಾತನಾಡಿ ಸಂಘವು 2023-24ನೇ ಸಾಲಿನಲ್ಲಿ ಒಟ್ಟು 87,70,06,127.76 ರೂಪಾಯಿಗಳ ವ್ಯವಹಾರ ನಡೆಸಿ ಸಂಘವು ಪ್ರಸ್ತುತ ಸಾಲಿನಲ್ಲಿ ರೂಪಾಯಿ 40,05,284.56 ಲಾಭ ಗಳಿಸಿದೆ. ಈ ಸಂದರ್ಭದಲ್ಲಿ ಸದಸ್ಯರಿಗೆ 10% ಡಿವಿಡೆಂಡ್‌ನ್ನು ಘೋಷಿಸಿ ಸಂಘದ ವ್ಯವಹಾರದ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಸಂಘದ ನಿರ್ದೇಶಕ ಡಾ|| ಗೀತಾಪ್ರಕಾಶ್. ಎ ಸಂಘದ ವ್ಯವಹಾರ ಮತ್ತು ಬೆಳವಣಿಗೆಯ ಬಗ್ಗೆ ಮಾತನಾಡಿದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತ್. ಪಿ. ವರದಿ ವಾಚಿಸಿದರು. ಸಭೆಯಲ್ಲಿ ಸಂಘದ ಜಮಾ ಖರ್ಜಿನ ವಿವರವನ್ನು ನಿಶ್ಮಿತಾ ಎಸ್.ಡಿ, ಲಾಭ ನಷ್ಟದ ತಃಬ್ತೆಯನ್ನು ಸಚಿತ್ ಕುಮಾರ್, ಆಸ್ತಿ ಜವಬ್ದಾರಿ ತಃಬ್ತೆಯನ್ನು ಶ್ರೇಯಸ್.ಕೆ ಓದಿ ಮಂಡಿಸಿದರು.

ಸಭೆಯಲ್ಲಿ ಸಂಘದ ಸದಸ್ಯರ ಕುಟುಂಬದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಎನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಹಿರಿಯ ಸದಸ್ಯರಾದ ಗಂಗಯ್ಯ ಎ ಮೆಲ್ಕಾರ್, ನೋಣಯ್ಯ ಪೂಜಾರಿ ಕಲ್ಲಕಟ್ಟ, ರಮೇಶ್ ಕಡಂಬು, ಜಗದೀಶ್ ಅಳಿಕೆಮಜಲು ಉಪಸ್ಥಿತರಿದ್ದರು.
ಕಾರ್ಯಕ್ರದಲ್ಲಿ ಸಂಘದ ಉಪಾಧ್ಯಕ್ಷ ಬಾಬು ಕೆ ಸ್ವಾಗತಿಸಿ, ಸಂಘದ ನಿರ್ದೇಶಕ ಸಂಜೀವ ಪೂಜಾರಿ ಎಂ.ಎಸ್ ವಂದಿಸಿದರು ಜಗನ್ನಾಥ ಎಸ್ ಕಾರ್ಯಕ್ರಮ ನಿರೂಪಿಸಿದರು.








