





ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಯಾಗಿ ಪುತ್ತೂರಿನ ಖ್ಯಾತ ಯೂಟ್ಯೂಬರ್ ಧನರಾಜ್ ಆಚಾರ್ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇವರು 1 ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಧನರಾಜ್ ಅವರು ತಮ್ಮ ಕಾಮಿಡಿ ವಿಡಿಯೋಗಳಿಂದ ಜನರ ಮನಗೆದ್ದಿದ್ದಾರೆ. ಕಾಮಿಡಿ ಜತೆಗೆ ಸಂದೇಶ ನೀಡುವುದು ಅವರ ರೀಲ್ಸ್ ನ ಪ್ಲಸ್ ಪಾಯಿಂಟ್. ಬಿಗ್ ಬಾಸ್ ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ, ರೆಬೆಲ್ ಲಾಯರ್ ಜಗದೀಶ್ ಕೂಡ ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ
ಚಿಕ್ಕ ವಯಸ್ಸಿನಿಂದಲೂ ಬಹಳ ಪ್ರತಿಭಾವಂತರಾಗಿದ್ದ ಧನರಾಜ್ ಅವರ ಅಭಿನಯ ಮಾಡಬೇಕು ಎನ್ನುವ ಹುಚ್ಚು ಬಯಕೆಗೆ ಉತ್ತಮ ಸಾಧನವಾಗಿದ್ದು, ಟೆಕ್ಸಾಕ್ ಟೆಕ್ಟಾಕ್ ಮೂಲಕ ಕಾಮಿಡಿ ವೀಡಿಯೋಗಳನ್ನು ಮಾಡುತ್ತಾ ಜನಪ್ರಿಯತೆ ಗಳಿಸಿದವರು ಧನರಾಜ್ ಕಳೆದ 6-7 ವರ್ಷಗಳಿಂದ ಟೆಕ್ ಟಾಕ್, ಫೇಸ್ ಬುಕ್ , ಇನ್ಸ್ಟಾಗ್ರಾಂ ಹಾಗೂ ಯೂಟ್ಯೂಬ್ ಮೂಲಕ ನೂರಾರು ವಿಡಿಯೋಗಳನ್ನು ತಯಾರಿಸಿ ಜನರನ್ನು ನಗೆ ಕಡಲಲ್ಲಿ ತೇಲಿಸಿದ್ದಾರೆ.
ಅನಂತಾಡಿ ಗ್ರಾಮದ ಮಾಮೇಶ್ವರ ಸಂಕೇಶ ನಿವಾಸಿ ಟಿಕ್‌ಟಾಕ್ ಕಮಲಜ್ಜಿಯವರು ಧನರಾಜ್ ಅವರ ಅಜ್ಜಿಯಾಗಿದ್ದು, ಅವರ ರೀಲ್ಸ್ ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಧನರಾಜ್ ಜೊತೆ ಕಮಲಜ್ಜಿ 50 ಕ್ಕೂ ಅಧಿಕ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಇಳಿವಯಸ್ಸಿನಲ್ಲೂ ಇವರು ಟಿಕ್ ಟಾಕ್ ವಿಡಿಯೋಗಳಲ್ಲಿ ತೋರುತ್ತಿದ್ದ ಅಭಿನಯ, ಮಾತಿನ ವೇಗ ಮನೆಮಂದಿಯ ಜೊತೆ ಬೆರೆಯುತ್ತಿದ್ದ ದೃಶ್ಯಾವಳಿಗಳಿಂದಾಗಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಅವರು ಪಡೆದಿದ್ದರು.
ಅಂಡರ್ ವರ್ಲ್ಡ್ ಡಾನ್ ರೀತಿ ಬಡವ ರಾಸ್ಕಲ್ ಸಿನಿಮಾ ಪ್ರಚಾರ ಈ ರೀತಿ ಹಲವು ಪಾತ್ರಗಳಲ್ಲಿ ಅಜ್ಜಿ ಮಿಂಚಿದ್ದರು. ಧನರಾಜ್ ಆಚಾರ್ ಟವರ ವಿಡಿಯೋದಲ್ಲಿ, ಅಜ್ಜಿಗೆ ಪ್ರಮುಖ ಸ್ನಾನ ಇತ್ತು. ಇನ್ನು ಧನರಾಜ್ ಕುಟುಂಬವೇ ಟೆಕ್ ಟಾಕ್ ಪ್ಯಾಮಿಲಿ ಎಂದು ಹೆಸರು ಪಡೆದಿತ್ತು.
ಗಿಕ್ಕಿ ಗಿಲಿಗಿಲಿ ಶೋ ಮೂಲಕ ಕಿರುತೆರೆ ಪ್ರವೇಶಿಸಿದ ಅವರು ಆನಂತರ ಅಬ್ಬಬ್ಬಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧನರಾಜ್ ಆಚಾರ್ ಬಿಗ್‌ಬಾಸ್ ಕನ್ನಡ ಸೀಸನ್ 1ರಲ್ಲಿ, ಸ್ಪರ್ಧಿಯಾಗಿ ಪ್ರದೇಶ ಮಾಡಿದ್ದಾರೆ.
ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಚಿನ್ನದ ಮಳಿಗೆ ಹೊಂದಿರುವ ಮಹಾನವಮಿ ಜ್ಯುವೆಲ್ಲರಿ ಮಾಲಕರಾದ ರಾಘವ ಮತ್ತು ಸಂದ್ಯಾ ದಂಪತಿಯ ಎರಡನೇ ಪುತ್ರ ದನರಾಜ್ ಆಚಾರ್. ಐಟಿ ಕಂಪೆನಿ ಉದ್ಯೋಗಿ ಸಂತೋಷ್ ಇವರ ಸಹೋದರ ಪತ್ನಿ ಪ್ರಜ್ಞಾ ಆಚಾರ್ ಕೂಡ ಟೆಕ್‌ಟಾಕ್ ಸ್ಟಾರ್ ಆಗಿದ್ದು, ಧನರಾಜ್ ಗೆ ರೀಲ್ಸ್ ಗಳಲ್ಲಿ ಸಾಥ್ ನೀಡುತ್ತಿದ್ದು ತನ್ನದೇ ಆದ ಪ್ಯಾನ್ ಬೇಸ್ ಅನ್ನು ಹೊಂದಿದ್ದಾರೆ.