Sunday, August 9, 2026
spot_imgspot_img
spot_imgspot_img

ಬ್ರಹ್ಮಾವರ: ಸಂಶಯಾಸ್ಪದವಾಗಿ ಮದರಸ ಹಾಸ್ಟೆಲ್‌ನ ಬಾತ್‌ರೂಮ್‌ನಲ್ಲಿ ವಿದ್ಯಾರ್ಥಿ ಸಾವು..!

- Advertisement -
- Advertisement -

ಬ್ರಹ್ಮಾವರ : ಮದರಸ ವಿದ್ಯಾರ್ಥಿಯೊಬ್ಬ ಹಾಸ್ಟೆಲ್‌ನ ಬಾತ್‌ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ವಾರಂಬಳ್ಳಿ ಗ್ರಾಮದ ರಿಹಾನ ಬೇಗಂ ಎಂಬವರ ಮಗ ಮುಹಮ್ಮದ್ ಜಹೀದ್(12) ಎಂದು ಗುರುತಿಸಲಾಗಿದೆ.

ಈತ ಕಳೆದ 4 ತಿಂಗಳಿನಿಂದ ಬ್ರಹ್ಮಾವರ ತಾಲೂಕಿನ ರಂಗನಕೆರೆಯ ಮದರಸದ ಹಾಸ್ಟೆಲ್‌ವೊಂದರಲ್ಲಿ ಉಳಿದುಕೊಂಡು ಹೇರಾಡಿ ಖಾಸಗಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾಭ್ಯಾಸ ಮಾಡಿಕೊಂಡಿದ್ದನು. ರಜೆಯಲ್ಲಿ ಮನೆಗೆ ಹೋಗಿದ್ದ ಜಹೀದ್ ರಜೆ ಮುಗಿಸಿ ಅ.11ರಂದು ಮದರಸದ ಹಾಸ್ಟೆಲ್‌ಗೆ ಹೋಗಿದ್ದನು ಎನ್ನಲಾಗಿದೆ.

ಅ.12ರಂದು ರಾತ್ರಿ ವೇಳೆ ಜಹೀದ್ ಮದರಸದ ಹಾಸ್ಟೆಲ್ ಬಾತ್‌ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಮಗನ ಸಾವಿನಲ್ಲಿ ಸಂಶಯವಿರುವುದಾಗಿ ತಾಯಿ ರಿಹಾನ ಬೇಗಂ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!