Saturday, June 28, 2025
spot_imgspot_img
spot_imgspot_img

ಸುಳ್ಯ: ಅಕ್ರಮ ಗೋ ಸಾಗಾಟಕ್ಕೆ ಯತ್ನ; ಮೂವರು ಪರಾರಿ, ಜಾನುವಾರುಗಳು ಸಹಿತ ಕಾರು ಪೊಲೀಸ್‌‌ ವಶ..!

- Advertisement -
- Advertisement -

ಸುಳ್ಯ: ಅಕ್ರಮವಾಗಿ ಸ್ವಿಪ್ಟ್ ಕಾರೊಂದರಲ್ಲಿ ದನಗಳನ್ನು ತುಂಬಿಸಿ ಸಾಗಾಟ ಮಾಡಲು ಯತ್ನಿಸಿದ ಘಟನೆ ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ಮುಚ್ಚಿಲ ಎಂಬಲ್ಲಿ ನಡೆದಿದೆ.

ಅ.14 ರಂದು ರಾತ್ರಿ ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ಮುಚ್ಚಿಲ ಎಂಬಲ್ಲಿ ಸ್ವಿಪ್ಟ್ ಕಾರೊಂದರಲ್ಲಿ ಅಕ್ರಮವಾಗಿ ದನಗಳನ್ನು ತುಂಬಿಸಿ ಸಾಗಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಈರಯ್ಯ ಡಿ ಎನ್ ಪೊಲೀಸ್ ಉಪನಿರೀಕ್ಷಕರು ಬೆಳ್ಳಾರೆ ಪೊಲೀಸ್ ಠಾಣೆರವರು ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ರಸ್ತೆಬದಿಯಲ್ಲಿ KA-19-Z-3350 ನೋಂದಣಿಯ ಬಿಳಿ ಬಣ್ಣದ ಕಾರೊಂದು ನಿಂತಿದ್ದು, ಕಾರನ್ನು ಪರಿಶೀಲಿಸಿದಾಗ ಕಾರಿನೊಳಗೆ ಹಿಂಸಾತ್ಮಕವಾಗಿ ಮೂರು ದನಗಳನ್ನು ತುಂಬಿಸಿರುವುದು ಕಂಡು ಬಂದಿರುತ್ತದೆ.

ಕಾರು ನಿಲ್ಲಿಸಿದ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ತೆರೆದ ದನದ ಕೊಟ್ಟಿಗೆಯಲ್ಲಿಯೂ 2 ಜಾನುವಾರುಗಳು ಕಂಡುಬಂದಿದ್ದು, ಆ ಜಾನುವಾರುಗಳನ್ನು ಮೂರು ಜನರು ಬಿಚ್ಚಲು ಪ್ರಯತ್ನಿಸುತ್ತಿದ್ದು ಪೊಲೀಸರನ್ನು ಕಂಡು ಓಡಿಹೋಗಿರುತ್ತಾರೆ. ಪರಾರಿಯಾದ ವ್ಯಕ್ತಿಗಳು ಕೊಟ್ಟಿಗೆಯಲ್ಲಿದ್ದ ದನಗಳನ್ನು ಹಾಗೂ ಕಾರಿನಲ್ಲಿದ್ದ ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದ ಮೇರೆಗೆ ದನಗಳನ್ನು, ಹಗ್ಗವನ್ನು ಮತ್ತು ದನಗಳನ್ನು ತುಂಬಿಸಿರುವ ಕಾರನ್ನು ಮುಂದಿನ ಕ್ರಮಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ. ಕ್ರ 81/2024 ಕಲಂ 5,7,12 ಕರ್ನಾಟಕ ತಡೆಗಟ್ಟುವ ಗೋಹತ್ಯೆ ಮತ್ತು ಗೋಶಾಲೆಯ ಸಂರಕ್ಷಣೆ – 2020 ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!