Tuesday, June 16, 2026
spot_imgspot_img
spot_imgspot_img

ಪೆರುವಾಯಿ: ವಿ.ಹಿಂ.ಪ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಆಶ್ರಯದಲ್ಲಿ 9ನೇ ವರ್ಷದ ಗೋಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

- Advertisement -
- Advertisement -

ಪೆರುವಾಯಿ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಆಶ್ರಯದಲ್ಲಿ 9ನೇ ವರ್ಷದ ಗೋಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನ. 3 ನೇ ಆದಿತ್ಯವಾರ ಪೆರುವಾಯಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ದ್ವೀಪ ಪ್ರಜ್ವಲಿಸಿ ಬಳಿಕ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಹಾಗೂ ಶ್ರೀ ರಾಜರಾಜೇಶ್ವರಿ ಮಾತೃಮಂಡಳೀ ಇವರಿಂದ ಭಜನಾ ಸೇವೆ ನಡೆಯಿತು. ನಂತರ ಶ್ರೀ ವಿಷ್ಣುಮೂರ್ತಿ ಕುಣಿತಾ ಭಜನಾ ತಂಡ ಮಾಣಿಲ ಹಾಗೂ ಪೆರುವಾಯಿ ಶ್ರೀ ರಾಜರಾಜೇಶ್ವರಿ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು.

ಬಳಿಕ ಧಾರ್ಮಿಕ ಮುಖಂಡರು, ರಂಗಭೂಮಿ ನಿರ್ದೇಶಕರು ಹಾಗೂ ಕಲಾವಿದರು ಮೋಹನ್‌ ದಾಸ್‌ ರೈ ಎರುಂಬು ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರದೀಪ್‌ ಸರಿಪಲ್ಲ, ಪ್ರಚಾರ ಪ್ರಸಾರ ಪ್ರಮುಖರು ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಇವರು ಧಾರ್ಮಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ

ಡಾ| ಕೃಷ್ಣ ಪ್ರಸನ್ನ, ಜಿಲ್ಲಾಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ , ಪ್ರಕಾಶ್ಚಂದ್ರ ಶೆಟ್ಟಿ ಎ ಕೆ ನಿಲಯ, ಅಧ್ಯಕ್ಷರು ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಪೆರುವಾಯಿ, ಗೋಪಾಲ ಕೃಷ್ಣ ಶೆಟ್ಟಿ ಸೇನೆರಪಾಲು ಮಾಜಿ ಪಂಚಾಯತ್ ಸದಸ್ಯರು ಗ್ರಾಮ ಪಂಚಾಯತ್ ಪೆರುವಾಯಿ, ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಗೌರವಾಧ್ಯಕ್ಷರು ಮಂಜುನಾಥ ಆಚಾರ್ಯ ಅಶ್ವಥನಗರ, ಶೇಖರ ಪೂಜಾರಿ ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್, ಶ್ರೀಮತಿ ಲಲಿತಾ ಆಚಾರ್ಯ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಪೆರುವಾಯಿ, ವಿನೀತ್ ಶೆಟ್ಟಿ ಕಾನ ಸಂಚಾಲಕರು ಬಜರಂಗದಳ ಘಟಕ ಪೆರುವಾಯಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ರಂಗದ ಹಿರಿಯ ಚೆಂಡೆ ಮತ್ತು ಮದ್ದಳೆ ವಾದಕರು ಪೆರುವಾಯಿ ಕೃಷ್ಣ ಭಟ್‌ ಕಡೆಂಗೋಡ್ಲು ಇವರ ಯಕ್ಷಗಾನ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು. ಹಾಗೂ ಪೆರುವಾಯಿ ಗ್ರಾಮದಲ್ಲಿ 2023-24 ನೇ ಶೈಕ್ಷಣಿಕ ವರ್ಷದಲ್ಲಿ SSLC ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಲಿಖಿತಾ ಎನ್‌ ಇವರನ್ನು ಸನ್ಮಾನಿಸಿ ಗೌರವಿಲಸಲಾಯಿತು.

ಯತೀಶ್‌ ಪೆರುವಾಯಿ ಸ್ವಾಗತಿಸಿ, ವರ್ಷಿತಾ ಹಾಗೂ ಶಾಶ್ವಿತ ಪ್ರಾರ್ಥಿಸಿದರು. ರಕ್ಷಿತ್‌ ಆಚಾರ್ಯ ಅಶ್ವಥನಗರ ಹಾಗೂ ಅಶ್ವಿನಿ ಪೆರುವಾಯಿ ಸನ್ಮಾನ ಪತ್ರ ವಾಚಿಸಿದರು. ಮೋಕ್ಷಿತ್‌ ಪೆರುವಾಯಿ ಧನ್ಯವಾದವಿತ್ತು, ನಾಗೇಶ್‌ ಮಾಸ್ಟರ್‌ ಕೊಲ್ಲತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

ಗೋಮಾತೆಗೆ ಗೋಪೂಜೆ ನಡೆದು ಬಳಿಕ ಸುಡುಮದ್ದು ಪ್ರದರ್ಶನವಾಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆದು, ಊರಿನ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು.

- Advertisement -

Related news

error: Content is protected !!