- Advertisement -
- Advertisement -



ಮೂಡಬಿದಿರೆ: ಓವರ್ ಟೇಕ್ ಮಾಡುವ ಭರದಲ್ಲಿ ಖಾಸಗಿ ಬಸ್ಸೊಂದ ಕಾಲೇಜು ಬಸ್ಗೆ ಢಿಕ್ಕಿ ಹೊಡೆದಿದ್ದು, ಕಾಲೇಜು ಬಸ್ನಲ್ಲಿದ್ದ ವಿದ್ಯಾರ್ಥಿಗಳು ಖಾಸಗಿ ಬಸ್ನ ಗಾಜು ಪುಡಿ ಮಾಡಿದ ಘಟನೆ ಮೂಡಬಿದ್ರೆಯ ಎಂಐಟಿಇ ಕಾಲೇಜು ಬಳಿ ನಡೆದಿದೆ.
ಮಾಸ್ಟರ್ ಹೆಸರಿನ ಖಾಸಗಿ ಬಸ್ ಚಾಲಕನ ಅಜಾಗರೂಕ ಚಾಲನೆಯಿಂದ ಈ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ವಿದ್ಯಾರ್ಥಿ ಹಾಗೂ ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿದೆಯೆಂದು ತಿಳಿದು ಬಂದಿದೆ. ಅಲ್ಲದೇ ಇತರ ಆಟೋ ಹಾಗೂ ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಎಂಐಟಿಇ ಕಾಲೇಜು ಬಸ್ನಲ್ಲಿ ವಿದ್ಯಾರ್ಥಿಗಳು ಬಸ್ನ ಗಾಜನ್ನು ಪುಡಿ ಮಾಡಿದ್ದಾರೆ.
- Advertisement -