- Advertisement -
- Advertisement -


ಕಾರ್ಕಳ: ಕಳೆದ ತಿಂಗಳ ಹಿಂದೆ ಗಂಡ ತೀರಿಕೊಂಡ ಬಳಿಕ ಮಾಸಿಕವಾಗಿ ಕೊರಗುತ್ತಿದ್ದ ಅಂಗನವಾಡಿ ಟೀಚರ್ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಿಯ್ಯಾರು ಕುಂಟಿಬೈಲ್ ಮಂಜಡ್ಕ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಸೌಮ್ಯ(39) ಎಂದು ಗುರುತಿಸಲಾಗಿದೆ.
ಮಿಯ್ಯಾರು ಚರ್ಚ್ ಬಳಿಯ ಅಂಗನವಾಡಿಯಲ್ಲಿ ಟೀಚರ್ ಆಗಿ ಕಳೆದ 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ ಇವರ ಪತಿ ಒಂದು ತಿಂಗಳ ಹಿಂದೆ ಮೃತಪಟ್ಟಿದ್ದರು. ಇದರಿಂದ ನೊಂದಿದ್ದ ಸೌಮ್ಯ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತದೇಹವನ್ನು ಕಾರ್ಕಳ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
- Advertisement -








