Tuesday, July 1, 2025
spot_imgspot_img
spot_imgspot_img

ಮಂಗಳೂರು: ಮನೆಯಿಂದ ದೇವಸ್ಥಾನಕ್ಕೆಂದು ಹೋಗಿದ್ದ ಮಹಿಳೆ ನಾಪತ್ತೆ

- Advertisement -
- Advertisement -

ಮಂಗಳೂರು: ಮನೆಯಿಂದ ದೇವಸ್ಥಾನಕ್ಕೆಂದು ಹೋಗಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಾಪತ್ತೆಯಾದ ಮಹಿಳೆ ಆಕಾಶಭವನ ಮುಲ್ಲಕಾಡು ನಿವಾಸಿ ಸದಾಶಿವ ಅವರ ಪತ್ನಿ ಸವಿತಾ (34) ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಇವರು 6 ತಿಂಗಳುಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ನ.10ರಂದು ಬೆಳಗ್ಗೆ 10.30ಕ್ಕೆ ಕಟೀಲು ದೇವಸ್ಥಾನಕ್ಕೆಂದು ಹೋಗಿದ್ದು, ವಾಪಸು ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.ಮಹಿಳೆಯು 5.5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದಾರೆ. ಬಿಳಿಬಣ್ಣದ ಚೂಡಿದಾರ, ಕೆಂಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಹಿಂದಿ, ಕನ್ನಡ, ತುಳು ಮಾತನಾಡುತ್ತಾರೆ. ಮಾಹಿತಿ ದೊರೆತವರು ಕಾವೂರು ಪೊಲೀಸ್‌ ಠಾಣೆ(0824-2220533)ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!