Tuesday, July 28, 2026
spot_imgspot_img
spot_imgspot_img

ಭಾರತೀಯ ಮೂಲದ ಕಮಲ ಹ್ಯಾರಿಸ್​ ಅಮೆರಿಕದ ಉಪಾಧ್ಯಕ್ಷೆ

- Advertisement -
- Advertisement -

ಕಮಲ ಹ್ಯಾರಿಸ್​ ಉಪಾಧ್ಯಕ್ಷರಾಗಿ ಅಮೆರಿಕದ ಶ್ವೇತಭವನಕ್ಕೆ ಪ್ರವೇಶಿಸಿದ ಮೊದಲ ಬ್ಲಾಕ್​ ಅಮೆರಿಕನ್​ ಮಹಿಳೆಯಾಗಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಏಷ್ಯಾನ್​ ಅಮೆರಿಕನ್​ ಮಹಿಳೆ ಇವರಾಗಿದ್ದಾರೆ.

ಕ್ಯಾಲಿಫೋರ್ನಿಯಾದ ಸೆನೆಟರ್​ ಆಗಿರುವ ಹ್ಯಾರಿಸ್​, ಈ ಮೊದಲು ಸ್ಯಾನ್​ಫ್ರಾಸಿಸ್ಕೋದಲ್ಲಿ ವಕೀಲರಾಗಿದ್ದರು. ಅಲ್ಲದೇ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್​ ಆಗಿ ಕೂಡ ಸೇವೆ ಸಲ್ಲಿಸಿದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಭಾರತೀಯ ಮೂಲದ ಹ್ಯಾರಿಸ್​ ಶ್ವೇತಭವನ ಪ್ರವೇಶ ಭಾರತೀಯರಲ್ಲಿಯೂ ಸಂತಸ ತಂದಿದೆ.

ಹ್ಯಾರಿಸ್​ ತಾಯಿ ಭಾರತೀಯರಾದರೆ, ತಂದೆ ಜಮೈಕಾದವರು. ಇವರಿಬ್ಬರು ಹಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ವಾಸ್ತವ್ಯ ಆರಂಭಿಸಿದ್ದರು.

ಬೈಡೆನ್​ ವಿಜಯದಲ್ಲಿ ಹ್ಯಾರಿಸ್​ ಪಾತ್ರ ಕೂಡ ಬಹಳಷ್ಟಿದೆ. ಮಹಿಳೆಯರು ಮತ್ತು ಕಪ್ಪು ವರ್ಣಿಯರನ್ನು ಸೆಳೆಯುವಲ್ಲಿ ಹ್ಯಾರಿಸ್​ ಪ್ರಮುಖ ಪಾತ್ರವಹಿಸಿದರು.

- Advertisement -

Related news

error: Content is protected !!