- Advertisement -
- Advertisement -



ಬೆಳ್ಳಾರೆ: ಕೆಳಗಿನ ಪೇಟೆಯ ಕೆ.ಹೆಚ್. ಅಬ್ದುಲ್ಲರ ಕೆ.ಹೆಚ್. ವೆಜಿಟೇಬಲ್ ಮತ್ತು ಕೆ.ಎಂ. ಮೊಹಮ್ಮದ್ ರವರ ಉದಯ ಚಿಕನ್ ಸೆಂಟರ್ ನಲ್ಲಿ ನ. 26ರಂದು ರಾತ್ರಿ ಕಳ್ಳತನ ನಡೆದಿದೆ.ಕೆ.ಹೆಚ್.ವೆಜಿಟೇಬಲ್ಸ್ ನ ಹಿಂಭಾಗದ ಬಾಗಿಲಿನ ಲಾಕ್ ನ್ನು ಪಿಕ್ಕಾಸಿನ ಮೂಲಕ ಒಡೆದು ಒಳ ನುಗ್ಗಿದ ಕಳ್ಳ ಅಂದಾಜು ರೂ.300ರಷ್ಟು ಹಣ ಕದ್ದಿರುವುದಾಗಿ ಮಾಲಕರು ತಿಳಿಸಿದ್ದಾರೆ.ತರಕಾರಿ ಅಂಗಡಿಯ ಹಿಂಭಾಗದಲ್ಲಿರುವ ಉದಯ ಚಿಕನ್ಸ್ ನ ಹಿಂಭಾಗದಲ್ಲಿ ಕೋಳಿಗಳಿರುವ ಭಾಗದಲ್ಲಿ ಧರಿಯನ್ನು ಪಿಕ್ಕಾಸು ಹಾಕಿ ತೆರೆದು ಅಂಗಡಿಯ ಒಳ ನುಗ್ಗಿ ಕಾಣಿಕೆ ಡಬ್ಬಿಯಲ್ಲಿದ್ದ ಅಂದಾಜು ರೂ 10000 ವನ್ನು ಲಪಟಾಯಿಸಿರುವುದಾಗಿ ಮಾಲಕರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಬೆಳ್ಳಾರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -








