Sunday, June 29, 2025
spot_imgspot_img
spot_imgspot_img

ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು(ರಿ.) ನೇತೃತ್ವದಲ್ಲಿ ತಾಲೂಕು ಮಟ್ಟದ ಕ್ರೀಡೋತ್ಸವ

- Advertisement -
- Advertisement -

ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು(ರಿ.) ಇದರ ನೇತೃತ್ವದಲ್ಲಿ ಬಂಟವಾಳ ತಾಲೂಕಿನ ಎಲ್ಲಾ ವಲಯ ಬಂಟರ ಸಂಘಗಳ ಸಹಯೋಗದಲ್ಲಿ ತಾಲೂಕು ಮಟ್ಟದ ಕ್ರೀಡೋತ್ಸವವು ಡಿ.1ನೇ ಆದಿತ್ಯವಾರ ಬೆಳಿಗ್ಗೆ 9:00 ಕ್ಕೆ “ಬಂಟವಾಳದ ಬಂಟರ ಭವನದ”ದ ವಠಾರದಲ್ಲಿ ನಡೆಯಲಿದೆ.

ತಾಲೂಕು ಮಟ್ಟದ ಸ್ಪರ್ಧೆಗಳ ವಿವರ:

ವಿ. ಸೂ. : ಈ ಕೆಳಗಿನ ಎಲ್ಲಾ ಸ್ಪರ್ಧೆಗಳಿಗೆ ಆಧಾರ್ ಕಾರ್ಡ್‌ ಪ್ರತಿ ಕಡ್ಡಾಯ

  • ಕಬಡ್ಡಿ ಪುರುಷರಿಗೆ (7+5)
  • ಕಬಡ್ಡಿ ಮಹಿಳೆಯರಿಗೆ (7+5)
  • ವಾಲಿಬಾಲ್ ಪುರುಷರಿಗೆ (6+3)
  • ತ್ರೋಬಾಲ್ ಮಹಿಳೆಯರಿಗೆ (9+3)
  • ಹಗ್ಗಜಗ್ಗಾಟ ಪುರುಷರಿಗೆ (9+2)
    *ವಾಲಿಬಾಲ್ ಮಹಿಳೆಯರಿಗೆ (6+3)
  • ಹಗ್ಗಜಗ್ಗಾಟ ಮಹಿಳೆಯರಿಗೆ (9+2)

ಬ್ಯಾಡ್ಮಿಂಟನ್ : 2 ಜನರ ತಂಡ (ಪುರುಷರು ಮತ್ತು ಮಹಿಳೆಯರು) : ಬ್ಯಾಡ್ಮಿಂಟನ್ ಆಟದ ನಿಯಮಾನುಸಾರ (ಪ್ರತೀ ವಲಯ ಸಂಘದಿಂದ ಪುರುಷರು ಹಾಗೂ ಮಹಿಳೆಯರ ಒಂದೊಂದೇ ತಂಡಕ್ಕೆ ಅವಕಾಶ. ಬ್ಯಾಡ್ಮಿಂಟನ್ ಸ್ಪರ್ಧೆಯು ವಿಠಲ ಶೆಟ್ಟಿ ಸಭಾಂಗಣದಲ್ಲಿ ನಡೆಯುವುದು)

  1. ಸ್ವತಂತ್ರ ಸ್ಪರ್ಧೆಗಳು:
    *ಎಲ್‌ಕೆಜಿ/ಯುಕೆಜಿ/1ನೇ ತರಗತಿಯ ಬಾಲಕರು ಮತ್ತು ಬಾಲಕಿಯರಿಗೆ- 50 ಮೀಟರ್‌ ಓಟ
    *2ನೇ/3ನೇ/4ನೇ ತರಗತಿಯ ಬಾಲಕರು ಮತ್ತು ಬಾಲಕಿಯರಿಗೆ- 50 ಮೀಟರ್‌ ಓಟ
    *5ನೇ/6ನೇ/7ನೇ ತರಗತಿಯ ಬಾಲಕರು ಮತ್ತು ಬಾಲಕಿಯರಿಗೆ- 100 ಮೀಟರ್‌ ಓಟ
    *8ನೇ/9ನೇ/10ನೇ ತರಗತಿಯ ಬಾಲಕರು ಮತ್ತು ಬಾಲಕಿಯರಿಗೆ- 100ಮೀಟರ್‌ ಓಟ
    *ಪ್ರಥಮ/ದ್ವಿತಿಯ ಪಿ.ಯು.ಸಿ ಬಾಲಕರು ಮತ್ತು ಬಾಲಕಿಯರಿಗೆ- 100 ಮೀಟರ್‌ ಓಟ *ಗುಂಡು ಎಸೆತ
    *ಪ್ರಥಮ ಪದವಿಯಿಂದ 25 ವರ್ಷದ ವರೆಗೆ ಬಾಲಕರು ಮತ್ತು ಬಾಲಕಿಯರಿಗೆ – 100 ಮೀಟರ್‌ ಓಟ, ಗುಂಡು ಎಸೆತ
    *25 ವರ್ಷದಿಂದ 40 ವರ್ಷದ ವರೆಗಿನ ಪುರುಷರು ಮತ್ತು ಮಹಿಳೆಯರಿಗೆ- 100 ಮೀಟರ್‌ ಓಟ, ಗುಂಡು ಎಸೆತ
    *40 ವರ್ಷದಿಂದ 50 ವರ್ಷದ ವರೆಗಿನ ಪುರುಷರು ಮತ್ತು ಮಹಿಳೆಯರಿಗೆ- 50 ಮೀಟರ್‌ ಓಟ, ಗುಂಡು ಎಸೆತ
    *50 ವರ್ಷದಿಂದ 60 ವರ್ಷದ ವರೆಗಿನ ಪುರುಷರು ಮತ್ತು ಮಹಿಳೆಯರಿಗೆ- 50 ಮೀಟರ್‌ ಓಟ, ಗುಂಡು ಎಸೆತ
    *60 ವರ್ಷದಿಂದ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗೆ– 50 ಮೀಟರ್‌ ಓಟ, ಗುಂಡು ಎಸೆತ
    *5ನೇ ಮತ್ತು 6ನೇ ಹಾಗೂ 7ನೇ ತರಗತಿಯ ಬಾಲಕರು ಮತ್ತು ಬಾಲಕಿಯರಿಗೆ- ಲಾಂಗ್‌‌ ಜಂಪ್‌‌
    *8ನೇ ಮತ್ತು 9ನೇ ಹಾಗೂ 10ನೇ ತರಗತಿಯ ಬಾಲಕರು ಮತ್ತು ಬಾಲಕಿಯರಿಗೆ- ಲಾಂಗ್‌‌ ಜಂಪ್‌‌
    *18ರಿಂದ 25 ವರ್ಷದ ಬಾಲಕರು ಮತ್ತು ಬಾಲಕಿಯರಿಗೆ-ಲಾಂಗ್ ಜಂಪ್
    25 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗೆ-ಲಾಂಗ್ ಜಂಪ್

ಚದುರಂಗ ಸ್ಪರ್ಧೆ/ಚೆಸ್ ಟೂರ್ನಮೆಂಟ್:
ಮಧ್ಯಾಹ್ನ ಗಂಟೆ 1.00ರಿಂದ ರಮಾನಾಥ ರೈ ಸಭಾಂಗಣದಲ್ಲಿ
*ಎಲ್‌ ಕೆಜಿಯಿಂದ 10 ವರ್ಷದ ವೆರೆಗಿನ ಬಾಲಕರು ಮತ್ತು ಬಾಲಕಿಯರಿಗೆ
*10ರಿಂದ 16 ವರ್ಷದ ವರೆಗಿನ ಬಾಲಕರು ಮತ್ತು ಬಾಲಕಿಯರಿಗೆ
*16ರಿಂದ 30 ವರ್ಷದ ವರೆಗಿನ ಬಾಲಕರು ಮತ್ತು ಬಾಲಕಿಯರಿಗೆ

  1. ಮನೋರಂಜನಾ ಸ್ಪರ್ಧೆಗಳು:
    *5ನೇ ತರಗತಿ ಒಳಗಿನ ಬಾಲಕರು ಮತ್ತು ಬಾಲಕಿಯರಿಗೆ-Bomb in the Number
    *5ರಿಂದ 8ನೇ ತರಗತಿ ವರೆಗಿನ ಬಾಲಕರು ಮತ್ತು ಬಾಲಕಿಯರಿಗೆ-Bomb in the Number
    *9ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ಬಾಲಕರು ಮತ್ತು ಬಾಲಕಿಯರಿಗೆ-Bomb in the Number
    *ಪ್ರಥಮ ಪದವಿಯಿಂದ 50 ವರ್ಷದ ವರೆಗಿನ ಪುರುಷರಿಗೆ ಮತ್ತು ಮಹಿಳೆಯರಿಗೆ-Bomb in the Number
    *50 ವರ್ಷದಿಂದ ಮೇಲ್ಪಟ್ಟ ಪುರುಷರಿಗೆ ಮತ್ತು ಮಹಿಳೆಯರಿಗೆ- Bomb in the Number
    *ಇನ್ನಿತರ ಮನೋರಂಜನಾ ಸ್ಪರ್ಧೆಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!